Sunday, 15th December 2024

ದುಬೈನಲ್ಲಿ ಧಾರಾಕಾರ ಮಳೆ: ಮೂರು ದೇಶಗಳಿಗೆ ವಿಮಾನ ಸಂಚಾರ ರದ್ದು…!

ವದೆಹಲಿ: ದುಬೈ ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಏ.16 ರಿಂದ ಭಾರತ, ಪಾಕ್, ಸೌದಿ, ಬ್ರಿಟನ್ ಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಧಾರಾಕಾರ ಮಳೆಯು ಮರು ಭೂಮಿ ದೇಶದ ಸುತ್ತಲೂ ವ್ಯಾಪಕವಾದ ಪ್ರವಾಹ ವನ್ನು ಉಂಟುಮಾಡಿದೆ. ದುಬೈನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಳಬರುವ ಹಲವಾರು ವಿಮಾನಗಳನ್ನು ಬೇರೆಡೆಗೆ ತೆರಳುವಂತೆ ಮಾಡಲಾಯಿತು.

ಪ್ರವಾಹ ಪರಿಸ್ಥಿತಿಯ ಕಾರಣದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಶಾಲೆಗಳನ್ನು ಮುಚ್ಚಲಾಯಿತು.

ಯುಎಇ ಮತ್ತು ಬಹ್ರೇನ್‌ನಾದ್ಯಂತ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ ಮತ್ತು ಒಮಾನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.