Friday, 22nd November 2024

8.70 ಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳ ಸಾಗಣೆ: ಇಬ್ಬರ ಬಂಧನ

ಮಿಜೋರಾಂ: ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಸುಮಾರು 8.70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ.

ಪುಕ್ಪುಯಿ ಪ್ರದೇಶದ ಟ್ಲಾಂಗ್ ಸೇತುವೆ ಬಳಿ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ 1.74 ಕೆಜಿ ಡ್ರಗ್ಸ್ ಅನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಇಬ್ಬರು ಚಂಫೈನ ನಿವಾಸಿಗಳಾಗಿದ್ದು ಮಾದಕವಸ್ತು ನಿಯಂತ್ರಣ ಕಾಯ್ಧೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು ಕಾರ್ಯಾಚರಣೆಯಲ್ಲಿ ಇಬ್ಬರು ಅಪ್ರಾಪ್ತ ರನ್ನು ಸಹ ಬಂಧಿಸಲಾಗಿದೆ ತನಿಖೆ ಮುಂದುವರೆದಿದೆ.

ಇದನ್ನು ಎಲ್ಲಿಂದ ತರಲಾಯಿತು ಮತ್ತು ಯಾರಿಗೆ ತಲುಪಿಸುತ್ತಿದ್ದರು ಎಂಬುದರ ಬಗ್ಗೆ ಸುಳಿವು ಜಾಡು ಹಿಡಿಯಲು ಗುಪ್ತಚರ ಅಧಿಕಾರಿಗಳ ಸಹಾಯ ಪಡೆಯಲಾಗುತ್ತಿದೆ.