Tuesday, 24th September 2024

Hidden Camera: ಬಾಡಿಗೆದಾರ ಮಹಿಳೆ ಮನೆಯ ಬಾತ್‌ರೂಮ್‌ನಲ್ಲಿ ಕ್ಯಾಮೆರಾ ಅಳವಡಿಸಿದ್ದವನ ಬಂಧನ!

Disability Man Arrested

ನವದೆಹಲಿ: ಬಾಡಿಗೆ ಮನೆ ಪಡೆದಿದ್ದ (Hidden Camera) ಮಹಿಳೆಯ ಬಾತ್‌ರೂಮ್ ಮತ್ತು ಬೆಡ್‌ರೂಮ್‌ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಸ್ಪೈ ಕ್ಯಾಮರಾ (spy camera) ಅಳವಡಿಸಿದ್ದ ವಿಕಲಾಂಗ ವ್ಯಕ್ತಿಯಾಗಿರುವ ಕರಣ್ (30) (Disability Man Arrested) ಎಂಬಾತನನ್ನು ದೆಹಲಿಯ (delhi police) ಶಕರ್‌ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಿವಿಲ್ ಸರ್ವಿಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಿಳೆ ಶಕರ್‌ಪುರದಲ್ಲಿ ಪಡೆದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರು ತಮ್ಮ ಊರಿಗೆ ಹೋದಾಗ ಮನೆಯ ಕೀಯನ್ನು ಮನೆ ಮಾಲೀಕರ ಬಳಿ ಬಿಟ್ಟು ಹೋಗಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡ ಮನೆ ಮಾಲೀಕನ ಮಗನಾದ ಕರಣ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಪೂರ್ವ ಗುಪ್ತಾ, ಮಹಿಳೆ ಇತ್ತೀಚೆಗೆ ತಮ್ಮ ವಾಟ್ಸಾಪ್ ಖಾತೆಯಲ್ಲಿ ಕೆಲವು ಅಸಾಮಾನ್ಯ ಚಟುವಟಿಕೆಯನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಅವರ ವಾಟ್ಸ್ ಆಪ್ ಖಾತೆಗೆ ಲಿಂಕ್ ಮಾಡಲಾದ ಸಾಧನಗಳ ಬಗ್ಗೆ ಪರಿಶೀಲಿಸಿದಾಗ ಅದರಲ್ಲಿ ಅವರು ಅಪರಿಚಿತ ಲ್ಯಾಪ್ ಟಾಪ್ ಲಿಂಕ್ ಆಗಿರುವುದು ತಿಳಿದು ಬಂತು. ತಕ್ಷಣ ಅವರು ಅದನ್ನು ಲಾಗ್ ಔಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Disability Man Arrested

ಮಹಿಳೆಗೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನುವಂತೆ ಭಾಸವಾಗುತ್ತಿತ್ತು. ಇದಕ್ಕಾಗಿ ಅವರು ತಮ್ಮ ಮನೆಯ ಪ್ರತಿಯೊಂದು ವಸ್ತುವನ್ನು ಕೂಲಂಕುಷವಾಗಿ ಪರಿಶೀಲಿಸಲು ಪ್ರಾರಂಭಿಸಿದರು. ಆಗ ಅವರಿಗೆ ಬಾತ್ ರೂಮ್ ನ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮೆರವೊಂದು ಪತ್ತೆಯಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದರು. ದೂರು ಸ್ವೀಕರಿಸಿದ ಸಬ್ ಇನ್ಸ್‌ಪೆಕ್ಟರ್ ಮಹಿಳೆಯ ಮನೆಗೆ ಬಂದು ತಪಾಸಣೆ ನಡೆಸಿದಾಗ ಬೆಡ್ ರೂಮ್ ನ ಬಲ್ಬ್ ಹೋಲ್ಡರ್‌ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಪತ್ತೆಯಾಗಿದೆ.

ಈ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಮಹಿಳೆ ತಾವು ಮೂರು ತಿಂಗಳ ಹಿಂದೆ ಊರಿಗೆ ಹೋದಾಗ ಕೀಯನ್ನು ಕರಣ್ ಬಳಿ ಕೊಟ್ಟಿರುವುದಾಗಿ ಹೇಳಿದ್ದಾರೆ. ಮಹಿಳೆಯ ಮನೆಯಲ್ಲಿ ಸಿಕ್ಕಿರುವ ಕ್ಯಾಮೆರಾಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲಾಗುವುದಿಲ್ಲ. ದೃಶ್ಯಗಳನ್ನು ಮೆಮೊರಿ ಕಾರ್ಡ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಹೀಗಾಗಿ ಕರಣ್ ತನ್ನ ಮನೆಯ ವಿದ್ಯುತ್ ರಿಪೇರಿ ನೆಪ ಮಾಡಿ ಮನೆಯ ಕೀಯನ್ನು ಪದೇ ಪದೇ ಕೇಳುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.

Police Firing: ಬೆಂಗಳೂರಿಗೆ ಗನ್ ಸಪ್ಲೈ ಮಾಡುತ್ತಿದ್ದ ಕೊಲೆ ಆರೋಪಿ ಮೇಲೆ ಪೊಲೀಸರ ಫೈರಿಂಗ್

ತನಿಖೆಯ ಸಂದರ್ಭದಲ್ಲಿ ಕರಣ್‌ನಿಂದ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸಂಗ್ರಹಿಸಲು ಬಳಸಲಾದ ಒಂದು ಸ್ಪೈ ಕ್ಯಾಮೆರಾ ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.