Saturday, 7th September 2024

ಮಣಿಪುರದಲ್ಲಿ 20 ವರ್ಷಗಳ ಬಳಿಕ ಹಿಂದಿ ಸಿನಿಮಾ ಪ್ರದರ್ಶನ

ಇಂಫಾಲ: ಮಣಿಪುರದಲ್ಲಿ ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ.

ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ಹಿಂದಿ ಸಿನಿಮಾ ಪ್ರದರ್ಶಿಸಲು ಬುಡಕಟ್ಟು ಸಂಘಟನೆಯ ‘ಹಮರ್‌ ವಿದ್ಯಾರ್ಥಿಗಳ ಸಂಘ’ವು ನಿರ್ಧರಿಸಿದೆ. ಚುರಚಂದಪುರ ಜಿಲ್ಲೆಯ ರೆಂಗಕೈ (ಲಮ್ಕಾ)ದಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ.

‘ದಶಕಗಳಿಂದ ಬುಡಕಟ್ಟು ಜನಾಂಗದವರನ್ನು ಅಧೀನದಲ್ಲಿರಿಸಿಕೊಂಡ ಭಯೋ ತ್ಪಾದಕ ಗುಂಪುಗಳಿಗೆ ನಮ್ಮ ಧಿಕ್ಕಾರ ಮತ್ತು ವಿರೋಧ ತೋರಿಸುವ ಸಂದರ್ಭವಿದು. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸುವ ಪ್ರತಿಜ್ಞೆ ಯನ್ನು ತೆಗೆದುಕೊಳ್ಳುವುದರಲ್ಲಿ ನಮ್ಮೊಂದಿಗೆ ಸೇರಿ’ ಎಂದು ಸಂಘಟನೆ ಸೋಮವಾರ ಕರೆ ನೀಡಿತ್ತು.

ಕೊನೆಯ ಬಾರಿ 1998ರಲ್ಲಿ ಸಾರ್ವಜನಿಕವಾಗಿ ‘ಕುಚ್‌ ಕುಚ್ ಹೋತಾ ಹೈ’ ಸಿನಿಮಾ ವನ್ನು ಪ್ರದರ್ಶಿಸಲಾಗಿತ್ತು ಎಂದು ಸಂಘ ಹೇಳಿದೆ.

ಸೆಪ್ಟೆಂಬರ್‌ 2000ರಲ್ಲಿ ಬಂಡಾಯವೆದ್ದ ‘ರೆವಲ್ಯೂಷನರಿ ಪೀಪಲ್ಸ್‌ ಫ್ರಂಟ್‌’ ಸಂಘಟನೆಯು ಹಿಂದಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೇ 6 ರಿಂದ 8 ಸಾವಿರದಷ್ಟು ವಿಡಿಯೊ ಮತ್ತು ಆಡಿಯೊ ಕ್ಯಾಸೆಟ್‌ಗಳನ್ನು ಸುಟ್ಟು ಹಾಕಲಾಗಿತ್ತು.

ಬಾಲಿವುಡ್‌ ಸಿನಿಮಾಗಳು ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಉಂಟುಮಾಡಲಿವೆ ಎನ್ನುವ ಆತಂಕವನ್ನು ಭಯೋತ್ಪಾದಕ ಸಂಘಟನೆಗಳು ಹೊಂದಿದ್ದವು ಎಂಬುದು ಕೇಬಲ್‌ ಆಪರೇಟರ್‌ಗಳ ಮಾತು. ಆದರೆ ಹಿಂದಿ ಸಿನಿಮಾಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಸಂಘಟನೆಯು ಯಾವುದೇ ಅಧಿಕೃತ ಕಾರಣಗಳನ್ನು ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!