Saturday, 5th October 2024

ಹೀರಾಬೆನ್‌ ಮೋದಿ ಆರೋಗ್ಯದಲ್ಲಿ ಚೇತರಿಕೆ

ಹಮದಾಬಾದ್:‌ ಅನಾರೋಗ್ಯದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಹೀರಾಬೆನ್‌ ಮೋದಿ(99) ಅವರ ಆರೋಗ್ಯ ಚೇತರಿಸಿದ್ದು, ಇನ್ನು ಒಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿ ಮನೆಗೆ ತೆರಳ ಲಿದ್ದಾರೆ.

ಹೀರಾಬೆನ್‌ ಅವರ ಆರೋಗ್ಯ ತ್ವರಿತವಾಗಿ ಚೇತರಿಸಿದೆ. ಇನ್ನೊಂದೆರಡು ದಿನದಲ್ಲಿ ಮನೆಗೆ ತೆರಳಲಿದ್ದಾರೆ ಎಂದು ಗುಜರಾತ್‌ ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಂಗಳವಾರ ರಾತ್ರಿ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದರು.

ಹೀಗಾಗಿ ಹೀರಾಬೆನ್‌ ಅವರು ದಾಖಲಾಗಿದ್ದ ಯುಎನ್‌ ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ & ರಿಸರ್ಚ್‌ ಸೆಂಟರ್‌ಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.