Thursday, 19th September 2024

ಭಾರತದಲ್ಲಿ 75ನೇ ವರ್ಷಕ್ಕೆ ಕಾಲಿಟ್ಟ ಹಿಟಾಚಿ ಎನರ್ಜಿ

ದೇಶಾದ್ಯಂತ 75,000 ಸಸ್ಯಗಳ ನೆಡಲಿದೆ ಹಿಟಾಚಿ 

ವಿಶ್ವ ಪರಿಸರ ಕಾಳಜಿ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು ಎಂಬುದು ಹಿಟಾಚಿ ಎನರ್ಜಿ ನಂಬಿಕೆ. ಇದೊಂದು ನಿರಂತರ ಪ್ರಕ್ರಿಯೆ; ಸದಾ ಪ್ರಯತ್ನ, ಜಾಗರೂಕತೆ ಮತ್ತು ಬದ್ಧತೆಗಳ ಅಗತ್ಯವಿರುತ್ತದೆ. ಹಿಟಾಚಿ ಎನರ್ಜಿಯ ಭಾಗವಾಗಿರುವ ನಾವು, ಪರಿಸರಕ್ಕಾಗಿ ನಮ್ಮಿಂದ ಸಾಧ್ಯವಿರುವ ರೀತಿಯಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತೇವೆ.

ಭಾರತದಲ್ಲಿ 75 ವರ್ಷಗಳನ್ನು ಪೂರೈಸುವ ಹಿಟಾಚಿ ಎನರ್ಜಿಯ ಸಂಭ್ರಮಾಚರಣೆಗಳ ಭಾಗವಾಗಿ, ಕಂಪನಿಯು ಸುಸ್ಥಿರ ಮತ್ತು ಹಸಿರು ಭವಿಷ್ಯವನ್ನು ಉತ್ತೇಜಿಸಲು ಮರ ನೆಡುವ ಪ್ರಮುಖ ಅಭಿಯಾನವೊಂದನ್ನು ಪ್ರಾರಂಭಿಸುತ್ತಿದೆ. ಈ 12 ತಿಂಗಳುಗಳಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಛೇರಿ ಆವರಣ ಗಳು ಮತ್ತು ಸಮುದಾಯದ ಸ್ಥಳಗಳಲ್ಲಿ 75,000 ಸಸಿಗಳನ್ನು ನೆಡಲಾಗುವುದು. ಈ ಯೋಜನೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು, ಪಾಲುದಾರ ಸಂಸ್ಥೆಗಳು ಮತ್ತು ನಮ್ಮ ಉದ್ಯೋಗಿಗಳು ಭಾಗವಹಿಸಲಿದ್ದಾರೆ; ನಾವೆಲ್ಲರೂ ಕೂಡಿ ಸಾರ್ವಜನಿಕ ಸಮುದಾಯ ಸ್ಥಳಗಳು ಮತ್ತು ಖಾಸಗಿ ಆಸ್ತಿಗಳನ್ನು ಹಸಿರಾಗಿ ಸಲು ಪ್ರಯತ್ನಿಸುತ್ತೇವೆ. ಈ ಇಡೀ ಉಪಕ್ರಮದಲ್ಲಿ ಎರಡು ಹಂತಗಳಿರುತ್ತವೆ: ಮೊದಲ ಹಂತದಲ್ಲಿ ಕಂಪನಿಯು 45,000 ಮತ್ತು ಎರಡನೇ ಹಂತದಲ್ಲಿ ಉಳಿದ 30,000 ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ.

ಈ ಉಪಕ್ರಮವು ಹಿಟಾಚಿ ಎನರ್ಜಿಯ ಸುಸ್ಥಿರ ಮತ್ತು ಪರಿಸರ ಕಾಳಜಿಯ ಬಗ್ಗೆ ಒತ್ತಿಹೇಳುತ್ತದೆ. ಈ ಯೋಜನೆಯಲ್ಲಿ ಸ್ಥಳೀಯ ಸಮುದಾಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದರ ಉದ್ದೇಶ, ತ್ವರಿತ ಅನುಷ್ಠಾನ. ಜೊತೆಗೆ, ಮಕ್ಕಳಿಗೆ ಸುಸ್ಥಿರ ಪರಿಸರದ ಮಹತ್ವವನ್ನು ತಿಳಿಸುತ್ತದೆ ಮತ್ತು ನಮ್ಮ ಗ್ರಹವನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ. 75,000 ಸಸಿಗಳನ್ನು ನೆಡುವುದು ಕೇವಲ ಸಾಂಕೇತಿಕ ಸೂಚಕವಲ್ಲ ಆದರೆ ಹಸಿರು ಭವಿಷ್ಯದತ್ತ ಒಂದು ಸ್ಪಷ್ಟವಾದ ಹೆಜ್ಜೆ. ಹಿಟಾಚಿ ಎನರ್ಜಿಯ ಸಹಕಾರಿ ಪ್ರಯತ್ನಗಳು ಇಂದಿನ ಹಾಳಾದ ವಾತಾವರಣವನ್ನು ಸರಿಪಡಿಸುವಲ್ಲಿ ಗಣನೀಯವಾದ ಪಾತ್ರವನ್ನು ವಹಿಸುತ್ತವೆ.

ಈ ಉಪಕ್ರಮವು ಹಿಟಾಚಿ ಎನರ್ಜಿಯ ಪರಿಸರ ಕಾಳಜಿ ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳಬೇಕೆಂಬ ಒಂದು ವಿಶಾಲ ಧ್ಯೇಯದ ಭಾಗವಾಗಿದೆ.

Leave a Reply

Your email address will not be published. Required fields are marked *