ಇಟಾಹ್: ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿ ನಲ್ಲಿ ವೈದ್ಯರು ಒಂದೇ ಸಿರಿಂಜ್ ಬಳಸಿ, ಹಲವು ರೋಗಿಗಳಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಮಗು ವೊಂದಕ್ಕೆ ಎಚ್ಐವಿ ಸೋಂಕು ತಗುಲಿದ್ದಾಗಿ ವರದಿಯಾಗಿದೆ.
ಬೆನ್ನಲ್ಲೇ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಟ್ ಪಾಠಕ್, ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಿದ್ದಾರೆ.
ಈ ಆಸ್ಪತ್ರೆಗೆ ಫೆ.20ರಂದು ಬಾಲಕಿಯೊಬ್ಬಳನ್ನು ದಾಖಲಿಸಲಾಗಿತ್ತು. ಆಕೆಗೆ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದಾರೆ. ಅದಾದ ಬಳಿಕ ಆಕೆಯ ರಕ್ತದಲ್ಲಿ ಎಚ್ಐವಿ ಪಾಸಿಟಿವ್ ಪತ್ತೆಯಾಗಿದೆ ಎಂದು ಅವಳ ಸಂಬಂಧಿಕರು ಆರೋಪಿಸಿ ದ್ದಾರೆ.
ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸೂಜಿಯಿಂದ ಹಲವು ಮಕ್ಕಳಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಎಚ್ಐವಿ ಕಾಣಿಸಿಕೊಂಡಿದ್ದು ಎಂದು ಬಾಲಕಿಯ ಪಾಲಕರು ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ದೂರು ಕೊಟ್ಟಿದ್ದಾರೆ.