Wednesday, 11th December 2024

ಪುಲ್ವಾಮಾ ಎನ್‌ಕೌಂಟರ್‌: ಹಿಜ್ಬುಲ್‌ ಮುಜಾಹಿದೀನ್‌ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.

ಭದ್ರತಾ ಪಡೆಗಳ ಮೇಲೆ ದಾಳಿ ಸೇರಿದಂತೆ, ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಾಗೂ “ಎ+ ಕೆಟಗರಿ’ಯಲ್ಲಿ ಸ್ಥಾನ ಪಡೆದಿದ್ದ ಉಗ್ರ ಫೆರೋಜ್‌ ಅಹ್ಮದ್‌ ದರ್‌ನನ್ನು ಹೊಡೆದು ರುಳಿಸಿದ್ದಾರೆ. ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.

2018ರಲ್ಲಿ ಶೋಪಿಯಾನ್‌ನ ಝೈನಪೋರಾದಲ್ಲಿ ನಾಲ್ವರು ಪೊಲೀಸರ ಸಾವಿಗೆ ಕಾರಣವಾದ ದಾಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ. 2017ರಿಂದಲೂ ಕಣಿವೆ ಯಲ್ಲಿ ಉಗ್ರ ದರ್‌ ಸಕ್ರಿಯನಾಗಿದ್ದು, 2019ರ ಫೆಬ್ರವರಿಯಲ್ಲಿ ಇಶ್ರತ್‌ ಮುನೀರ್‌ ಎಂಬ ಬಾಲಕಿಯನ್ನೂ ಕೊಂದಿದ್ದ.

ಎನ್‌ಕೌಂಟರ್‌ ನಡೆದ ಸ್ಥಳದಿಂದ ಎಕೆ ರೈಫ‌ಲ್‌, ಮೂರು ಮ್ಯಾಗಜಿನ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.