Friday, 22nd November 2024

’ಹೋಮ್ ಕ್ವಾರಂಟೈನ್ ಕಡ್ಡಾಯ’ ಸುತ್ತೋಲೆ ವಾಪಸ್‌

ಬೆಂಗಳೂರು : ಚೀನಾ, ಹಾಂಕಾಂಗ್, ಜಪಾನ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದಿಂದ ಆಗಮಿಸುವ ಪ್ರಯಾಣಿಕರಿಗೆ ಏಳು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದ ಡಿಸೆಂಬರ್ 31 ರ ಸುತ್ತೋಲೆಯನ್ನು ಆರೋಗ್ಯ ಇಲಾಖೆ ಹಿಂಪಡೆದಿದೆ.

ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ಹೈರಿಸ್ಕ್ ದೇಶ ಗಳಿಂದ ಬಂದ ಪ್ರಯಾಣಿಕರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು.

ಆದರೆ ಜನವರಿ 2 ರಂದು ಇಲಾಖೆಯ ಹೊಸ ಸುತ್ತೋಲೆಯು ಹಿಂದಿನ ಸುತ್ತೋಲೆಯನ್ನು ಹಿಂತೆಗೆ ದುಕೊಳ್ಳಲಾಗಿದೆ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.

ಭಾರತ ಸರ್ಕಾರದ ಮಾರ್ಗಸೂಚಿಗಳು ಈ ದೇಶಗಳಿಂದ ಬರುವ ಜನರಿಗೆ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಮಾತ್ರ ಕಡ್ಡಾಯಗೊಳಿದೆ.

Read E-Paper click here