ಬೆಳಗ್ಗೆ ಎದ್ದ ತಕ್ಷಣ ಹೆಚ್ಚಿನ ಜನರು ಟೀ, ಕಾಫಿ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದರ ಬದಲು ಬಿಸಿ ನೀರನ್ನು ಕುಡಿಯಿರಿ. ಇದು ಹಲವು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು(Hot Water Benefits) ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಹಾಗಾದ್ರೆ ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.
ಆರೋಗ್ಯಕರ ಜೀರ್ಣಕ್ರಿಯೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ವೇಗವಾಗಿ ಆಹಾರವನ್ನು ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದು ನಿಯಮಿತ ಕರುಳಿನ ಚಲನೆಯನ್ನು ಬೆಂಬಲಿಸುವ ಮೂಲಕ ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ
ಬಿಸಿನೀರು ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ. ವ್ಯಕ್ತಿಯ ದೇಹದ ತಾಪಮಾನವನ್ನು ಹೆಚ್ಚಿಸುವಷ್ಟು ಬಿಸಿ ನೀರನ್ನು ಕುಡಿದಾಗ ಅದು ಬೆವರುವಿಕೆಗೆ ಕಾರಣವಾಗುತ್ತದೆ. ಬೆವರುವುದರಿಂದ ದೇಹದ ವಿಷ ಹೊರಗೆ ಹೋಗುತ್ತದೆ. ಮತ್ತು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ತೂಕ ನಷ್ಟ
ಹೆಚ್ಚು ನೀರು ಕುಡಿಯುವುದರಿಂದ ವ್ಯಕ್ತಿಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಭಾವನೆ ಬರುತ್ತದೆ. ಅದರಿಂದ ಹೆಚ್ಚು ಆಹಾರ ಸೇವಿಸಲು ಆಗುವುದಿಲ್ಲ. ಮತ್ತು ದೇಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳಲು ನೀರು ಸಹಾಯ ಮಾಡುತ್ತದೆ ಮತ್ತು ಅನಗತ್ಯ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ.
ರಕ್ತಪರಿಚಲನೆಯನ್ನು ಸುಧಾರಿಸುತ್ತದೆ
ಬಿಸಿನೀರು ರಕ್ತನಾಳಗಳನ್ನು ವಿಸ್ತರಿಸುತ್ತದೆ. ಇದರಿಂದ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಇದು ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಡಿಮೆಯಾದ ನೋವು
ಬಿಸಿನೀರು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಗಾಯಗೊಂಡ ಸ್ನಾಯುಗಳಿಗೆ ರಕ್ತ ಸರಿಯಾದ ಹರಿದು ಗಾಯ ಬೇಗ ವಾಸಿಯಾಗುತ್ತದೆ. ಮತ್ತು ಬಿಸಿ ನೀರು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಇದರಿಂದ ಮೈಕೈ ನೋವು ಕಡಿಮೆಯಾಗುತ್ತದೆ.
ಶೀತವನ್ನು ನಿವಾರಿಸಿ, ಸೈನಸ್ ಆರೋಗ್ಯವನ್ನು ಸುಧಾರಿಸುವುದು
ಸೈನಸ್ ರಂಧ್ರಗಳಿಗೆ ಸೋಂಕು ತಗುಲಿದಾಗ ಅದು ಬ್ಲಾಕ್ ಆಗಿ ಶೀತದ ಸಮಸ್ಯೆ ಕಾಡುತ್ತದೆ ಹಾಗಾಗಿ ಬಿಸಿ ನೀರು ಕುಡಿದರೆ ಸೈನಸ್ ತೆರೆದುಕೊಳ್ಳುತ್ತದೆ. ಇದರಿಂದ ಶೀತದ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ಬಿಸಿನೀರು ಕುಡಿಯುವುದರಿಂದ ಲೋಳೆ ಅಂಶ ಕರಗಿ ದೇಹದಿಂದ ಹೊರಗೆ ಬರುತ್ತದೆ. ಇದರಿಂದ ಕಫ, ಕೆಮ್ಮು ಮತ್ತು ಮೂಗು ಕಟ್ಟಿಕೊಳ್ಳುವ ಸಮಸ್ಯೆ ಕಾಡುವುದಿಲ್ಲ.
ಒತ್ತಡ ಕಡಿಮೆ ಮಾಡುತ್ತದೆ
ಒಂದು ಕಪ್ ಬಿಸಿನೀರು ಜನರ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಆತಂಕದ ಭಾವನೆಗಳನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಚಳಿಗಾಲದಲ್ಲಿ ಈ ಆಹಾರ ಸೇವಿಸಿ
ಹಾಗಾಗಿ ಪ್ರತಿದಿನ ಎಲ್ಲರೂ ಒಂದು ಕಪ್ ಬಿಸಿ ನೀರನ್ನು ಕುಡಿಯುವುದನ್ನು ಮರೆಯಬೇಡಿ. ಆದರೆ ಅತಿಯಾದ ಬಿಸಿ ನೀರನ್ನು ಕುಡಿಯುವುದನ್ನು ತಪ್ಪಿಸಿ.