Thursday, 12th December 2024

House collapsed: 50 ವರ್ಷ ಹಳೆಯ 3ಅಂತಸ್ತಿನ ಮನೆ ಕುಸಿತ; ಅವಶೇಷಡಿಯಲ್ಲಿ ಹಲವು ಸಿಲುಕಿರುವ ಶಂಕೆ

house collapsed

ಮೀರತ್:‌ ಉತ್ತರಪ್ರದೇಶ(Uttar Pradesh)ದ ಮೀರತ್‌(Meerut)ನಲ್ಲಿ ಬಹು ಅಂತಸ್ತಿನ ಕಟ್ಟಡವೊಂದು ಕುಸಿದು(House collapsed) ಬಿದ್ದಿದ್ದು, ಸುಮಾರು ಎಂಟರಿಂದ ಹತ್ತು ಜನ ಅವಶೇಷದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಲೋಹಿಯನಗರದ ಪೊಲೀಸ್‌ ಠಾಣೆಯ ಬಳಿ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅವಶೇಷದಡಿಯಲ್ಲಿ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾಕಿರ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 50ವರ್ಷ ಹಳೆಯ ಮನೆಯೊಂದು ಇದ್ದಕ್ಕಿದ್ಧಂತೆ ಕುಸಿದು ಬಿದ್ದಿದೆ. ಘಟನೆ ಬಗ್ಗೆ ವರದಿವಾಗ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೊಲೀಸರು, ರಕ್ಷಣಾ ತಂಡ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ಮನೆಯಲ್ಲಿ ವಾಸವಿರುವ ಕುಟುಂಬ ಹಾಲಿನ ವ್ಯಾಪಾರ ನಡೆಸುತ್ತಿದ್ದು, ಇದು ನಫೋ ಅಲ್ಲಾಹುದ್ದೀನ್‌ ಎಂಬಾತನಿಗೆ ಸೇರಿದ ಮನೆಯಾಗಿದೆ. ಇಬ್ಬರು ಮಕ್ಕಳು ಅವರ ಪತ್ನಿಯರು ಹಾಗೂ ಮಕ್ಕಳು ಇದ್ದಾರೆ. ಇನ್ನು ಮನೆಯ ಹಟ್ಟಿಯಲ್ಲಿ ಕಟ್ಟಿದ ಎರಡು ಎಮ್ಮೆಗಳು ಅವಶೇಷದಡಿಯಲ್ಲಿ ಸಿಲುಕಿವೆ ಎನ್ನಲಾಗಿದೆ. ಇನ್ನು ಇದೊಂದು ಅತ್ಯಂತ ಹೆಚ್ಚು ಜನ ನಿಬಿಡ ಪ್ರದೇಶವಾಗಿರುವುದರಿಂದ ಬುಲ್ಡೋಜರ್‌ಗಳು ಕೂಡ ತಲುಪಲು ಸಾಧ್ಯವಾಗಿಲ್ಲ.

ಈ ಸುದ್ದಿಯನ್ನೂ ಓದಿ: ಭೂಕುಸಿತದಿಂದ ಮನೆ ಕುಸಿತ: ಮಗು, ತಾಯಿ ಸೇರಿ ನಾಲ್ವರ ಸಾವು