Saturday, 14th December 2024

House Rent New Rules: ಮನೆ ಬಾಡಿಗೆಗೆ ನೀಡಿದ್ದೀರಾ? ಹಾಗಿದ್ದರೆ ಹೊಸ ನಿಯಮದ ಬಗ್ಗೆ ತಿಳಿದುಕೊಂಡಿರಿ

House Rent New Rules

ಸ್ವಂತ ಮನೆಯನ್ನು ಬಾಡಿಗೆಗೆ (House Rent New Rules) ನೀಡುತ್ತಿದ್ದೀರಾ ಅಥವಾ ಬಾಡಿಗೆಗೆ ನೀಡುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೆ ಶಾಕ್ ಕೊಡುವ ಸುದ್ದಿಯೊಂದು ಇಲ್ಲಿದೆ. ಯಾಕೆಂದರೆ ಮನೆ ಬಾಡಿಗೆ ನಿಯಮಗಳಲ್ಲಿ ಕೇಂದ್ರ ಸರ್ಕಾರ (Central Govt) ಹಲವು ಮಹತ್ವದ ಬದಲಾವಣೆಗಳನ್ನು (House Rent New Rules) ಮಾಡಿದ್ದು, ಇದರಿಂದ ಇನ್ನು ಮುಂದೆ ಮನೆ ಬಾಡಿಗೆ ನೀಡುವುದು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡಬಹುದು.

ಸಾಮಾನ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಮನೆಗಳನ್ನು ಬಾಡಿಗೆಗೆ ನೀಡುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ. ಇದು ಭೂಮಾಲೀಕರ ತೆರಿಗೆ ವಂಚನೆಯನ್ನು ತಡೆಯಲು ಮಾಡಿರುವ ಅತ್ಯಂತ ಮಹತ್ವದ ನಿಯಮವಾಗಿದೆ.

ಮನೆ ಬಾಡಿಗೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಹೀಗಿರುವಾಗ ಮನೆಯನ್ನು ಬಾಡಿಗೆಗೆ ನೀಡಲು ಯೋಚಿಸುತ್ತಿದ್ದರೆ ಅಥವಾ ಮನೆಯನ್ನು ಈಗಾಗಲೇ ಬಾಡಿಗೆಗೆ ನೀಡಿದ್ದರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ. ಇಲ್ಲವಾದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾದಾ ಸಾಧ್ಯತೆಗಳಿವೆ.

ಭೂಮಾಲೀಕರು ಮತ್ತು ಹಿಡುವಳಿದಾರರಿಗೆ ಸಂಬಂಧಿಸಿದ ಕಾನೂನುಗಳಲ್ಲಿನ ಬದಲಾವಣೆಯನ್ನು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸುವಾಗ ಘೋಷಿಸಿದ್ದರು. ಇದರಲ್ಲಿ ಬಾಡಿಗೆಗೆ ಸಂಬಂಧಿಸಿದ ನಿಯಮಗಳು ಸೇರಿವೆ. ಈ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಮನೆಯನ್ನು ಬಾಡಿಗೆಗೆ ನೀಡುವುದು ಸುಲಭವಲ್ಲ.

House Rent New Rules

ಏನಿದೆ ಹೊಸ ನಿಯಮ?

ಹೊಸ ನಿಯಮವು 2025ರಿಂದ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ ಯಾರು ತಮ್ಮ ಮನೆಯನ್ನು ಬಾಡಿಗೆಗೆ ನೀಡುತ್ತಾರೋ ಅವರು ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಭೂಮಾಲೀಕರು ಬಾಡಿಗೆ ಮನೆಯಿಂದ ಬರುವ ಆದಾಯವನ್ನು ಮನೆಯ ಆಸ್ತಿಯಿಂದ ಬಂದ ಆದಾಯವೆಂದು ತೋರಿಸಬೇಕಾಗುತ್ತದೆ. ಇದಕ್ಕಾಗಿ ಬಾಡಿಗೆದಾರರು ತಮ್ಮ ಮನೆ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಇನ್ನು ಮುಂದೆ ಬಾಡಿಗೆ ಮನೆಯಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. 2025ರ ಏಪ್ರಿಲ್ 1ರಿಂದ ಇದು ಅನ್ವಯವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Job News: ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಅರ್ಜಿ ಆಹ್ವಾನ

ಮನೆ ಆಸ್ತಿಯ ಆದಾಯದ ಅಡಿಯಲ್ಲಿ ಭೂಮಾಲೀಕರಿಗೆ ಕೆಲವು ವಿನಾಯಿತಿಗಳೂ ಇವೆ. ತೆರಿಗೆ ಕಡಿತದ ಅಡಿಯಲ್ಲಿ ಆಸ್ತಿಯ ನಿವ್ವಳ ಮೌಲ್ಯದ ಶೇ. 30ರಷ್ಟು ತೆರಿಗೆಯನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸರ್ಕಾರವು ಅನೇಕ ವಿಧದ ವೆಚ್ಚಗಳ ಮೇಲೆ ವಿನಾಯಿತಿಯನ್ನು ನೀಡಲಿದೆ.