Thursday, 12th December 2024

ಮನೆಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ: ನಾಲ್ವರು ಮಕ್ಕಳು ಸಾವು

ಮೀರತ್: ಉತ್ತರ ಪ್ರದೇಶದ ಪಲ್ಲವಪುರಂ ಪ್ರದೇಶದ ಮನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ ದ್ದಾರೆ ಮತ್ತು ಅವರ ಪೋಷಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪಲ್ಲವಪುರಂನ ಜನತಾ ಕಾಲೋನಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ ಸಾರಿಕಾ (10), ನಿಹಾರಿಕಾ (8), ಸಂಸ್ಕಾರ್ ಅಲಿಯಾಸ್ ಗೋಲು (6) ಮತ್ತು ಕಾಲು (4) ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಅವರ ಪೋಷಕ ರಾದ ಜಾನಿ (41) ಮತ್ತು ಬಬಿತಾ (37) ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಡ್ ಶೀಟ್ ಗೆ ಬೆಂಕಿ ಹೊತ್ತಿ ಕೊಂಡು ಪೂರ್ತಿ ಮನೆಗೆ ಬೆಂಕಿ ಹಬ್ಬಿದೆ. ಘಟನೆ ಸಂಬಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.