Thursday, 19th September 2024

330 ಎಕರೆ ಜಾಗದಲ್ಲಿದ್ದ ಅಕ್ರಮ ಮನೆಗಳ ನೆಲಸಮ

ಗುವಾಹಟಿ: ಬ್ರಹ್ಮಪುತ್ರ ನದಿ ದಂಡೆ ಮೇಲೆ 330 ಎಕರೆ ಭೂಮಿಯಲ್ಲಿ ಅಕ್ರಮ ವಾಗಿ ಕಟ್ಟಿಸಿದ್ದ ಮನೆಗಳನ್ನು ಜೆಸಿಬಿ ಮೂಲಕ ಧರೆಗುರುಳಿಸಿರುವ ಕಾರ್ಯಾ ಚರಣೆ ನಡೆಸಲಾಯಿತು.

ಅಸ್ಸಾಂನ ಸೋನಿತ್‍ಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಮನೆಗಳನ್ನು ಕೆಡವಲಾಗಿದೆ.

ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ಬರ್ಚಲ್ಲಾದ 3ನೇ ಚಿಟಲ್ಮರಿ ಪ್ರದೇಶದಲ್ಲಿ ಇರುವ ಮನೆಗಳನ್ನು ಕೆಡವಲು 50 ಜೆಸಿಬಿ, ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು, ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಮನೆಗಳನ್ನು ಕೆಡವಲು ಮುನ್ನೆಚ್ಚರಿಕೆ ಕ್ರಮವಾಗಿ ಅಸ್ಸಾಂ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಸೇರಿದಂತೆ ಸುಮಾರು 1,200 ಭದ್ರತಾ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 299 ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸು ತ್ತಿದ್ದವು. ಆದರೆ ಅವರಲ್ಲಿ ಶೇ.90ಕ್ಕೂ ಹೆಚ್ಚು ಕುಟುಂಬಗಳು ಸುಮಾರು 8 ತಿಂಗಳ ಹಿಂದೆ ನೋಟಿಸ್ ಸ್ವೀಕರಿಸಿದ್ದು, ಆಗಲೇ ಈ ಪ್ರದೇಶದಿಂದ ತೊರೆದಿದ್ದಾರೆ.