Saturday, 27th April 2024

ಹೈದರಾಬಾದ್‌ನಲ್ಲಿ ಫೈಟ್‌: ಓವೈಸಿಗೆ ಸಾನಿಯಾ ಎದುರಾಳಿ..!

ಹೈದರಾಬಾದ್: ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸ್ಪರ್ಧಿಸುವ ಕ್ಷೇತ್ರ ಭಾರೀ ರಂಗು ಪಡೆಯುವ ಸಾಧ್ಯತೆ ಇದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಮಣಿಸಲು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಪ್ರಯತ್ನ ಪಡುತ್ತಿವೆ. ಹೀಗಾಗಿ ಓವೈಸಿಯನ್ನು ಸೋಲಿಸಲು ದೇಶದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಕಣಕ್ಕಿಳಿಸಿ ಹೈದರಾಬಾದ್‌ನಲ್ಲಿ ನೇರಾನೇರಾ ಫೈಟ್‌ಗೆ ದಾರಿ ಮಾಡಿಕೊಡಲು ರಾಜಕೀಯ ಪಕ್ಷ ಪ್ಲಾನ್ ಮಾಡಿದೆ. ಹೀಗಾಗಿ ಹೈದರಬಾದ್‌ನಲ್ಲಿ ಈ ಬಾರಿ ಕದನ ಕುತೂಹಲ ಸೃಷ್ಟಿಸುವ ಸಾಧ್ಯತೆ ಇದೆ.

ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿಗೆ ನೇರ ಸ್ಪರ್ಧೆ ನೀಡುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯ ಲಾಭವನ್ನು ಪಡೆಯಲು ಬಯಸಿದೆ. ಸಾನಿಯಾ ಮಿರ್ಜಾ ಅವರನ್ನು ಹೈದರಾಬಾದ್‌ನಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದು, ಓವೈಸಿ ಕಳೆದ ನಾಲ್ಕು ಚುನಾವಣೆಗಳಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಕಾರಣ ಹೈದರಾಬಾದ್‌ ನಿಂದ ಸ್ಪರ್ಧೆ ಕುತೂಹಲ ಮೂಡಿಸಲಿದೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದರಲ್ಲಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಹಿಂದೆ 1980ರಲ್ಲಿ ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ಗೆ ಕೊನೆಯ ಗೆಲುವಾಗಿತ್ತು. ನಂತರ, 1984 ರಲ್ಲಿ, ಸುಲ್ತಾನ್ ಸಲಾವುದ್ದೀನ್ ಓವೈಸಿ ಈ ಸ್ಥಾನವನ್ನು ಸ್ವತಂತ್ರವಾಗಿ ಗೆದ್ದರು. ನಂತರ 1989 ಮತ್ತು 1999 ರ ನಡುವೆ ಅವರು AIMIM ಟಿಕೆಟ್‌ನಲ್ಲಿ ಇಲ್ಲಿಂದ ಸಂಸದರಾದರು. ಸುಲ್ತಾನ್ ಸಲಾವುದ್ದೀನ್ ಅವರ ಹಿರಿಯ ಮಗ ಅಸಾದುದ್ದೀನ್ ಓವೈಸಿ ಪಕ್ಷದಿಂದ ಸ್ಪರ್ಧಿಸಿ ಅಂದಿನಿಂದ ನಿರಂತರವಾಗಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!