ಹೈದರಾಬಾದ್: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದೆ.
ಎರಡೂ ರಾಜ್ಯಗಳಲ್ಲಿ ಶಂಕಿತ ಮಾವೋ ಉಗ್ರರ ಅಡಗುತಾಣಗಳು ಮತ್ತು ಆವರಣಗಳಲ್ಲಿ ಇನ್ನೂ ದಾಳಿ ನಡೆಯುತ್ತಿದೆ. ಖಚಿತ ಮಾಹಿತಿಗಳ ಅನುಸರಿಸಿ ಬೆಳಿಗ್ಗೆಯಿಂದಲೇ ಪ್ರತ್ಯೇಕ ಎನ್ಐಎ ತಂಡಗಳು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯ ದಲ್ಲಿ ದಾಳಿ ನಡೆಸಲು ಪ್ರಾರಂಭಿಸಿದವು.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎಡಪಂಥೀಯ ಉಗ್ರವಾದ ಅಥವಾ ಮಾವೋ ವಾದಿ ಪ್ರಕರಣದಲ್ಲಿ ಒಟ್ಟು 60 ಸ್ಥಳ ಗಳನ್ನು ಶೋಧಿಸಲಾಗುತ್ತಿದೆ. ತೆಲಂಗಾಣದ ಹೈದರಾ ಬಾದ್ನಲ್ಲಿ ಮತ್ತು ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಮಾವೋವಾದಿ ಸಹಾನುಭೂತಿ ಹೊಂದಿರುವವರ ಜೊತೆ ಸಂಪರ್ಕ ಹೊಂದಿರುವ ಶಂಕಿತ ನಾಗರಿಕ ಹಕ್ಕುಗಳ ಸಹಾನುಭೂತಿ ಹೊಂದಿರುವ ಹಲವಾರು ನಾಯಕರ ಮನೆಗಳನ್ನು ಶೋಧಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 9 ರಂದು, ಎನ್ಐಎ ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ಆಗಸ್ಟ್ 2023 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಸ್ತುಗಳು, ಡ್ರೋನ್ಗಳು ಮತ್ತು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಒಳಗೊಂಡ ಲ್ಯಾಥ್ ಯಂತ್ರ ವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಸರಣಿ ದಾಳಿ ಮತ್ತು ಹುಡುಕಾಟಗಳನ್ನು ನಡೆಸಿ ದ್ದವು.