ಹೈದರಾಬಾದ್: ಬಲ್ಕಂಪೇಟೆಯಲ್ಲಿ ಯಲ್ಲಮ್ಮ ದೇವಿಯ ಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಎಲ್ಲರಿಗೂ ಒಂದೇ ಸಾಲಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಸಮಸ್ಯೆ ಶುರುವಾಗಿದೆ. ಮತ್ತೊಂದೆಡೆ ವಿಐಪಿ ಪಾಸ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ವಿಐಪಿ ಪಾಸ್‌ಗಳನ್ನು ಮನಸೋಇಚ್ಛೆ ನೀಡಿದ್ದರಿಂದ ಮತ್ತು ಅನಿರೀಕ್ಷಿತವಾಗಿ ಲಕ್ಷಾಂತರ ಜನ ಸೇರಿದ್ದರಿಂದ ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿರುವುದು ಕಂಡು ಬಂದಿದೆ.
ಸಾವಿರಾರು ಭಕ್ತರು ದೇವಸ್ಥಾನದ ಬಳಿಯ ಬೋನಾಳ ಸಂಕೀರ್ಣದಲ್ಲಿ ಬೀಡು ಬಿಟ್ಟಿದ್ದರು. ಅಲ್ಲಿದ್ದ ಮಾದಕ ವ್ಯಸನಿಗಳು ಮತ್ತು ಹಳೆ ಕ್ರಿಮಿನಲ್‌ಗಳು ಮಧ್ಯರಾತ್ರಿಯ ನಂತರ ಧಾವಿಸಿದ್ದು, ನಶೆಯಲ್ಲಿದ್ದ ಅವರು ಭಕ್ತರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.