Thursday, 12th December 2024

ಎಫ್‌ಐಆರ್‌ ಇಲ್ಲದೆ ನನ್ನನ್ನು 28 ಗಂಟೆ ಕಾಲ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ವಾಗ್ದಾಳಿ

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ, ತಮ್ಮ ಸರ್ಕಾರ ಯಾವುದೇ ಆದೇಶ ಅಥವಾ FIR ಇಲ್ಲದೆ ಕಳೆದ 28 ಗಂಟೆಗಳ ಕಾಲ ನನ್ನನ್ನು ಬಂಧನದಲ್ಲಿರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ, ರೈತರ ಮೇಲೆ ದಾಳಿ ನಡೆಸಿದವರನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ಕೇಳಿದರು. ಟ್ವೀಟ್ ಜೊತೆಗೆ, ಗಾಂಧಿ ಒಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೆಲವು ಪ್ರತಿಭಟನಾಕಾರರ ಮೇಲೆ ಕಾರು ಓಡಿಸಿದ ವಿಡಿಯೋ ತುಣುಕು ಇದೆ.

ಭಾನುವಾರದ ಹಿಂಸಾಚಾರ ಜಿಲ್ಲೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ತೆರಳುತ್ತಿದ್ದಾಗ ಪಕ್ಷದ ಕಾನೂನು ತಜ್ಞ ದೀಪೇಂದ್ರ ಸಿಂಗ್ ಹೂಡಾ ಮತ್ತು ಇತರರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿಯನ್ನು ಸೋಮವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.