Thursday, 12th December 2024

ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ

ವದೆಹಲಿ: “ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ” ಎಂಬುದು ತಿಹಾರ್ ಜೈಲಿನಿಂದ ದೇಶವಾಸಿಗಳಿಗೆ ದೆಹಲಿ ಮುಖ್ಯಮಂತ್ರಿ ನೀಡಿದ ಸಂದೇಶವಾಗಿದೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಅವರನ್ನ ‘ದುರುದ್ದೇಶ ಮತ್ತು ಸೇಡಿನಿಂದ’ ಹೊರತರಲು ಪ್ರಯತ್ನಿಸುತ್ತಿದೆ. ಆದ್ರೆ ಈ ಎಲ್ಲದರಿಂದ ಅವರು ಬಲಶಾಲಿಯಾಗಿ ಹೊರಹೊಮ್ಮುತ್ತಾರೆ ಎಂದು ಸಿಂಗ್ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ತಿಹಾರ್ ಜೈಲಿನಲ್ಲಿರುವ ಕುಖ್ಯಾತ ಅಪರಾಧಿಗೆ ಬ್ಯಾರಕ್ನಲ್ಲಿ ತನ್ನ ವಕೀಲರು ಮತ್ತು ಪತ್ನಿಯನ್ನ ಭೇಟಿಯಾಗಲು ಅವಕಾಶ ನೀಡಲಾಯಿತು, ಆದರೆ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನ ಗಾಜಿನ ಪರದೆಯ ಮೂಲಕ ಭೇಟಿಯಾಗಬೇಕಾಯಿತು ಎಂದು ಆರೋಪಿಸಿದರು.

ತಮ್ಮನ್ನ ನಡೆಸಿಕೊಳ್ಳುತ್ತಿರುವ ರೀತಿಯಿಂದ ನೋವು ವ್ಯಕ್ತಪಡೆಸಿದ ಕೇಜ್ರಿವಾಲ್, “ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ” ಎಂಬ ಸಂದೇಶವನ್ನ ದೇಶವಾಸಿಗಳಿಗೆ ಕಳುಹಿಸಿದ್ದಾರೆ ಎಂದು ಸಿಂಗ್ ಹೇಳಿದರು.