Sunday, 15th December 2024

ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್

ಕೊಚ್ಚಿ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ, ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್‌ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಬಂಧಿಸಿದರು.

ಪ್ರಕರಣ ಸಂಬಂಧ ಶಿವಶಂಕರ್‌ ರನ್ನು ಈ ಹಿಂದೆ ಇ.ಡಿ ಬಂಧಿಸಿತ್ತು. ಮಂಗಳವಾರ ಶಿವಶಂಕರ್‌ ಅವರನ್ನು ಇರಿಸಲಾಗಿರುವ ಜೈಲಿಗೆ ಕಸ್ಟಮ್‌ ಆಯುಕ್ತರು ಭೇಟಿ ನೀಡಿ, ಬಂಧನವನ್ನು ಔಪಚಾರಿಕವಾಗಿ ದಾಖಲಿಸಿದರು.

ಶಿವಶಂಕರ್ ರನ್ನು ಬಂಧಿಸುವ ಕುರಿತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಗಳ ವಿಚಾರಣೆ ನಡೆ ಸುವ ವಿಶೇಷ ನ್ಯಾಯಾಲಯ, ಕಸ್ಟಮ್ಸ್‌ಗೆ ಸೋಮವಾರ ಅನುಮತಿ ನೀಡಿತ್ತು.