Saturday, 5th October 2024

IED Found: ಸೇನೆಯನ್ನು ಗುರಿಯಾಗಿಸಿ ಭೀಕರ ದಾಳಿಗೆ ಭಾರೀ ಸಂಚು? ಸ್ಫೋಟಕ ಸಾಧನ ಪತ್ತೆ

IED found

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu-Kashmir)ದಲ್ಲಿ ಶನಿವಾರ ರಾತ್ರಿ ಸ್ಫೋಟಕ ಸಾಧನವೊಂದು ಪತ್ತೆಯಾಗಿದೆ. ಪೊಲೀಸರು ಶನಿವಾರ ಜಮ್ಮು ಜಿಲ್ಲೆಯ ಘರೋಟಾ ಪ್ರದೇಶದಲ್ಲಿ ಒಂದು ಶಂಕಿತ ಸುಧಾರಿತ ಸ್ಫೋಟಕ ಸಾಧನವನ್ನು (IED Found) ಪತ್ತೆ ಮಾಡಿದ್ದಾರೆ. ಮಾಹಿತಿ ಪಡೆದ ಕೂಡಲೇ ಭದ್ರತಾ ಪಡೆಗಳು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಅವರನ್ನು ನಿಷ್ಕ್ರೀಯಗೊಳಿಸಿದೆ.

ಘರೋಟಾದ ರಿಂಗ್ ರೋಡ್‌ನಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿಯಾಗಿ ಗಸ್ತು ತಿರುಗುವ ವೇಳೆ ಈ ಸ್ಫೋಟಕ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು ತ್ವರಿತವಾಗಿ ಪ್ರದೇಶವನ್ನು ಸುತ್ತುವರೆದು ಎಲ್ಲಾ ಸಂಚಾರವನ್ನು ಸ್ಥಗಿತಗೊಳಿಸಿದರು ಮತ್ತು ಮುನ್ನೆಚ್ಚರಿಕೆಯಾಗಿ ವಾಹನಗಳ ಸಂಚಾರವನ್ನು ಬೇರೆ ರಸ್ತೆಗೆ ಡೈವರ್ಟ್‌ ಮಾಡಲಾಯಿತು. ತಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಅದನ್ನು ನಿಷ್ಕ್ರೀಯಗೊಳಿಸಲಾಗಿದೆ.

ಈ ಭಾರೀ ಸ್ಫೋಟಕ ಹೇಗೆ ಪತ್ತೆಯಾಯಿತು, ಯಾರು ತಂದು ಇರಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸ್ಫೋಟಕ ಬಳಸಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಭಾರೀ ಸ್ಫೋಟಕ್ಕೆ ದುಷ್ಕರ್ಮಿಗಳು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಕುಪ್ವರಾ ಜಿಲ್ಲೆಯ ಕೇರನ್‌ ಸೆಕ್ಟರ್‌ (Keran Sector)ನಲ್ಲಿರುವ ಗಡಿ ನಿಯಂತ್ರಣ ರೇಖೆ(Line of control) ಬಳಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟೀ ಕಾರ್ಯಾಚರಣೆ ವೇಳೆ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಆಮೂಲಕ ಪ್ರಧಾನಿ ಭೇಟಿ ವೇಳೆ ದಾಳಿಗೆ ಭಾರೀ ಸಂಚು ರೂಪಿಸಲಾಗಿತ್ತುಎಂಬುದು ಬಯಲಾಗಿದೆ.

ಎಕ್ಸ್‌ನಲ್ಲಿ ಸೇನೆ ಪೋಸ್ಟ್‌ವೊಂದನ್ನು ಮಾಡಿದ್ದು, ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಜಂಟೀ ಕಾರ್ಯಾಚರಣೆ ಕೈಗೆತ್ತಿಕೊ‍ಳ್ಳಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಯುದ್ಧಕ್ಕೆ ಬೇಕಾದಂತಹ ಶಸ್ತ್ರಾಸ್ತ್ರಗಳನ್ನು ಕಂಡು ಸೇನೆ ಶಾಕ್‌ ಆಗಿದೆ. ದಾಳಿ ವೇಳೆ ಎಕೆ 47 ಪಿಸ್ತೂಲ್‌ , ಹ್ಯಾಂಡ್ ಗ್ರೆನೇಡ್‌ಗಳು, ಆರ್‌ಪಿಜಿ ರೌಂಡ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು, ಮದ್ದು ಗುಂಡುಗಳು ಮತ್ತು ಸ್ಫೋಟಕಗಳು ಪತ್ತೆಯಾಗಿದ್ದು, ಅದನ್ನು ಸೀಜ್‌ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: Hassan Nasrallah: ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?