Thursday, 12th December 2024

ಯಾವಾಗ ಓರ್ವ ಹಿಂದೂ ಎಚ್ಚರಗೊಳ್ಳುತ್ತಾನೋ, ಆಗ ವಿಶ್ವವೇ ಎಚ್ಚರಗೊಳ್ಳುತ್ತದೆ: ಮೋಹನ್‌ ಭಾಗವತ್‌

ಉತ್ತರಾಖಂಡ: ಹಿಂದೂ ಯುವತಿಯರ, ಯುವಕರ ಮತಾಂತರವು ತಪ್ಪು, ಹಾಗೆಯೇ ಯುವ ಜನರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವುದು ಅಗತ್ಯ ಇದೆ,” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಯಾವಾಗ ಓರ್ವ ಹಿಂದೂ ಎಚ್ಚರಗೊಳ್ಳುತ್ತಾನೋ, ಆ ಬಳಿಕ ಇಡೀ ವಿಶ್ವವೇ ಎಚ್ಚರಗೊಳ್ಳುತ್ತದೆ,” ಎಂದು ಅಭಿಪ್ರಾಯಿಸಿದರು.

ಹಲ್ದ್ವಾನಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರನ್ನು ಉದ್ದೇಶಿಸಿ, ತಮ್ಮ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಉತ್ತಮ ಭಾವನೆ ಬೆಳೆಯುವಂತಹ ಸಂಸ್ಕಾರವನ್ನು ಕಲಿಸಿಕೊಡಿ,” ಎಂದು ಪೋಷಕರಿಗೆ ತಿಳಿಸಿದರು.

ಈ ಮತಾಂತರವನ್ನು ಯಾರು ಮಾಡುತ್ತಾರೋ ಅದು ತಪ್ಪು, ಆದರೆ ನಾವು ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲವೇ?. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕೃತಿ ನೀಡಬೇಕು. ನಮ್ಮ ಧರ್ಮದ ಬಗ್ಗೆ ನಮ್ಮ ಯುವಕರಲ್ಲಿ ಹೆಮ್ಮೆಯನ್ನು ನಾವು ಮೂಡಿಸಬೇಕು, ಹಾಗೆಯೇ ನಮ್ಮ ಸಂಸ್ಕೃತಿ ಬಗ್ಗೆ ಗೌರವವನ್ನು ನಾವು ಮೂಡಿಸಬೇಕು,” ಎಂದು ಕಿವಿಮಾತು ಹೇಳಿದರು.

ಭಾರತದ ಪ್ರವಾಸಿ ತಾಣಗಳಿಗೆ ನಮ್ಮ ಜನರು ಭೇಟಿ ನೀಡಬೇಕು. ಹಾಗೆಯೇ ಮನೆಯಲ್ಲೇ ಮಾಡಿದ ಆಹಾರವನ್ನು ಸೇವಿಸಿ ಹಾಗೂ ಸಾಂಪ್ರದಾಯಿಕ ಉಡುಪನ್ನು ಧರಿಸಬೇಕು ಎಂದು ಕೂಡಾ ಸಲಹೆ ನೀಡಿದರು.

ನಾವು ಆರು ಮಂತ್ರಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, “ಆ ಆರು ಮಂತ್ರಗಳು ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರವಾಸ, ಉಡುಪು ಹಾಗೂ ಮನೆ,” ಎಂದರು. ಇನ್ನು ಜನರು ಸಂಪ್ರದಾಯವನ್ನು ಪಾಲಿಸಬೇಕು ಎಂದು ಹೇಳುವ ಸಂದರ್ಭ ದಲ್ಲೇ ಮೋಹನ್‌ ಭಾಗವತ್‌ ಅವರು, “ಅಸ್ಪೃಶ್ಯತೆಯನ್ನು ನಾವು ಪಾಲನೆ ಮಾಡಬಾರದು,” ಎಂದು ಒತ್ತಿ ಹೇಳಿದರು.