Sunday, 15th December 2024

ಹೊಸ ಖಾಸಗಿ ನೀತಿ ಒಪ್ಪದಿದ್ದರೆ ಮೇ.15 ಕ್ಕೆ ವಾಟ್ಸಾಪ್‌ ಸೇವೆ ಸ್ಥಗಿತ ?

ನವದೆಹಲಿ : ನೂತನ ಖಾಸಗಿ ನೀತಿಗೆ ಗ್ರಾಹಕರು ಒಪ್ಪದೇ ಹೋದರೆ ಮೊಬೈಲ್‌ನಲ್ಲಿ ವಾಟ್ಸಾಪ್‌ ಸೇವೆ ಮೇ.15 ಕ್ಕೆ ಸ್ಥಗಿತ ಗೊಳ್ಳಲಿದೆ.

ಬಳಕೆದಾರರ ಮಾಹಿತಿ ಸಂಗ್ರಹ ಮತ್ತು ಆ ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳುವ ತನ್ನ ಹೊಸ ನೀತಿ ಬಗ್ಗೆ ವಾಟ್ಸಾಪ್‌ ಸಂಸ್ಥೆ ಮತ್ತೆ ಗ್ರಾಹಕರಿಗೆ ಮೆಸೇಜ್ ಕಳುಹಿಸಲು ಪ್ರಾರಂಭ ಮಾಡಿದೆ.

ಫೆ.8 ರಿಂದಲೇ ನೂತನ ನೀತಿ ಜಾರಿಯಾಗಬೇಕಿತ್ತು. ಆದರೆ, ಬಳಕೆದಾರರ ತೀವ್ರ ಆಕ್ರೋಶದ ಹಿನ್ನೆಲೆ, ವಾಟ್ಸಾಪ್‌ ಸಂಸ್ಥೆ ನೂತನ ನೀತಿ ಜಾರಿಯನ್ನು ಮೇ.15ಕ್ಕೆ ಮುಂದೂಡಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಲಾಗ್‌ಪೋಸ್ಟ್‌ನಲ್ಲಿ ವಾಟ್ಸಾಪ್, ಈ ನವೀಕರಣದ ಕುರಿತು ನಾವು ಹಿಂದೆ ಸಮಸ್ಯೆ ಎದುರಿಸಿದ್ದೇವೆ. ಯಾವುದೇ ಗೊಂದಲ ನಿವಾರಿಸಲು ಬಳಕೆದಾರರಿಗೆ ಅನುಕೂಲವಾಗುವಂತೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದೆ.