ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್ ಗಳಿಂದ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆ ಯಲ್ಲಿ ಎಎಂಸಿ ತಮ್ಮ ಗಾಡಿಗಳನ್ನ ವಶಕ್ಕೆ ಪಡೆದಿತ್ತು.
ಇದಕ್ಕೆ ಸಂಬಂಧಿಸಿ, 25 ಜನ ಬೀದಿ ವ್ಯಾಪಾರಿಗಳು ಕೋರ್ಟ್ ಮೊರೆ ಹೋಗಿದ್ದರು. ಸಮಸ್ಯೆ ಆಲಿಸಿದ ಹೈಕೋರ್ಟ್ ಎಎಂಸಿ ಗೆ ಪ್ರಶ್ನೆ ಕೇಳಿದೆ. ನಾನು ಹೊರಗೆ ಏನು ತಿನ್ನಬೇಕು ಎಂದು ನೀವೂ ನಿರ್ಧರಿಸುವುದಾದರೆ ಹೇಗೆ..? ನಾಳೆ ನೀವೂ ಹೊರಗೆ ಏನು ತಿನ್ನಬೇಕು ಎಂದು ಹೇಳುತ್ತೀರಾ..? ಕಬ್ಬಿನ ರಸ ಕುಡಿದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಅದನ್ನ ಕುಡಿಬೇಡಿ ಎಂದು ಆಯುಕ್ತರು ಹೇಳುತ್ತಾರೆಯೇ..? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಮಾಂಸಾಹಾರ ಮಾರಾಟ ಮಾಡುವ ಗಾಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ರಾಜ್‌ಕೋಟ್ ಮೇಯರ್ ಕಳೆದ ತಿಂಗಳು ಹೇಳಿದ್ದರು. ಈ ಹಿನ್ನೆಲೆ ಬೀದಿ ಬದಿ ವ್ಯಾಪಾರಿಗಳ ಗಾಡಿಗಳನ್ನ ವಶಕ್ಕೆ ಪಡೆಯಲಾಗಿತ್ತು.
ವಶ ಪಡಿಸಿಕೊಂಡಿರುವ ಗಾಡಿಗಳನ್ನು 24 ಗಂಟೆಯೊಳಗೆ ವ್ಯಾಪಾರಿಗಳಿಗೆ ಹಿಂತಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.