Friday, 25th October 2024

ಐಐಟಿ ಬಾಂಬೆಯಲ್ಲಿ ಹಿಂದೂ ದೇವರಿಗೆ ಅವಹೇಳನ: ವಿದ್ಯಾರ್ಥಿಗಳಿಗೆ ದಂಡ

ಮುಂಬೈ: ಐಐಟಿ ಬಾಂಬೆಯಲ್ಲಿ ಹಿಂದೂ ದೇವರಿಗೆ ಅವಹೇಳನ ಮಾಡುವಂತಹ ನಾಟಕವಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ದಂಡ ವಿಧಿಸ ಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ ಬಯಲು ರಂಗಮಂದಿರದಲ್ಲಿ ಇನ್‌ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕದಲ್ಲಿ ವಿದ್ಯಾರ್ಥಿಗಳು ರಾಮಾಯಣದ ಕಥಾ ಹಂದರವನ್ನು ಹೊಂದಿ ರುವ ನಾಟಕವಾಡಿದ್ದರು. ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು.

ಅಲ್ಲದೇ ನಾಟಕಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಶಿಸ್ತು ಸಭೆ ಕರೆದ ಐಐಟಿ ಅಲ್ಲಿನ ಚರ್ಚೆಗಳ ಆಧಾರದ ಮೇಲೆ ಶಿಕ್ಷಾರ್ಹ ಕ್ರಮಗಳನ್ನು ಶಿಫಾರಸು ಮಾಡಿದೆ. ಅದರಂತೆ ಜುಲೈ 20, 2024ರಂದು ವಿದ್ಯಾರ್ಥಿ ವ್ಯವಹಾರ ಡೀನ್ ಕಚೇರಿ ಯಲ್ಲಿ ರೂ. 1.2ಲಕ್ಷ ದಂಡವನ್ನು ಪಾವತಿಸಬೇಕಾಗಿ ಹೇಳಿದೆ.