ಬೆಂಗಳೂರು: ಇಂಡಿಯಾ ಪೋಸ್ಟ್ ಗ್ರಾಮೀಣ ಡಾಕ್ ಸೇವಕ್ (ಇಂಡಿಯಾ ಪೋಸ್ಟ್ ಜಿಡಿಎಸ್) ನೇಮಕಾತಿಯ (India Post Jobs) ಎರಡನೇ ಮೆರಿಟ್ ಪಟ್ಟಿ ಇಲಾಖೆಯು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈ ಪಟ್ಟಿಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಹುದ್ದೆಗೆ ಅರ್ಜಿ ಸಲ್ಲಿಸಿದ ಮತ್ತು ಮೊದಲ ಮೆರಿಟ್ ಪಟ್ಟಿಯಲ್ಲಿ ಹೆಸರು ಇಲ್ಲದ ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಬಹುದು. ಮೆರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ indiapostgdsonline.cept.gov.in ನೀಡಬೇಕು. ಈ ನೇಮಕಾತಿಯ ಮೂಲಕ ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಒಟ್ಟು 44,228 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿಯ ಎರಡನೇ ಮೆರಿಟ್ ಪಟ್ಟಿಯನ್ನು ಅನೇಕ ವಿಭಾಗಗಳಿಗೆ ಬಿಡುಗಡೆ ಮಾಡಲಾಗಿದೆ. ಅದನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಅಸ್ಸಾಂ, ಜಾರ್ಖಂಡ್, ಕೇರಳ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ಬಿಹಾರ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ , ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿವೆ.
ಮುಂದಿನ ಹಂತ ದಾಖಲೆ ಪರಿಶೀಲನೆ
ದಾಖಲೆ ಪರಿಶೀಲನೆಯನ್ನು 3 ಅಕ್ಟೋಬರ್ 2024ರಂದು ಮಾಡಲಾಗುತ್ತದೆ. ಇಂಡಿಯಾ ಪೋಸ್ಟ್ ಜಿಡಿಎಸ್ 2ನೇ ಮೆರಿಟ್ ಲಿಸ್ಟ್ 2024 ರಲ್ಲಿ ಸೇರಿಸಲಾದ ಅಭ್ಯರ್ಥಿಗಳು ಆಯಾ ವಲಯಗಳಲ್ಲಿನ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಲ್ಲಿ ಅಂತಿಮ ಪೋಸ್ಟಿಂಗ್ ಪಡೆಯಲು ದಾಖಲೆ ಪರಿಶೀಲನೆಗಾಗಿ ಹಾಜರಾಗಬೇಕಾಗುತ್ತದೆ. ಈ ಪ್ರಕ್ರಿಯೆಗಾಗಿ, ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ತಮ್ಮ ಹೆಸರಿನೊಂದಿಗೆ ಉಲ್ಲೇಖಿಸಿದ ವಿಭಾಗೀಯ ಮುಖ್ಯಸ್ಥರಿಗೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Job Guide: 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ NTPC; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಜಿಡಿಎಸ್ ನೇಮಕಾತಿಯ ಮೊದಲ ಮೆರಿಟ್ ಪಟ್ಟಿಯನ್ನು ಆಗಸ್ಟ್ 19 ರಂದು ಬಿಡುಗಡೆ ಮಾಡಲಾಗಿತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅರ್ಜಿ ಸಂಖ್ಯೆಯ ಮುಂದೆ ಉಲ್ಲೇಖಿಸಲಾದ ವಿಭಾಗೀಯ ಮುಖ್ಯಸ್ಥರ ಮೂಲಕ ಡಿವಿ ಮಾಡಲು ಸೆಪ್ಟೆಂಬರ್ 3, 2024 ರವರೆಗೆ ಸಮಯ ನೀಡಲಾಗಿತ್ತು.
ಮೆರಿಟ್ ಪಟ್ಟಿ ಡೌನ್ಲೋಡ್ ಮಾಡುವುದು ಹೇಗೆ?
- ಮೊದಲನೆಯದಾಗಿ, ಇಂಡಿಯಾ ಪೋಸ್ಟ್ ಜಿಡಿಎಸ್ indiapostgdsonline.gov.in ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಖು.
ಮುಖಪುಟದಲ್ಲಿ ‘ಕ್ಯಾಂಡಿಡೇಟ್ಸ್ ಕಾರ್ನರ್’ ಹುಡುಕಬೇಕು.
ಈಗ ‘ಜಿಡಿಎಸ್ ಆನ್‌ಲೈನ್ ಎಂಗೇಜ್ಮೆಂಟ್ ವೇಳಾಪಟ್ಟಿ, ಜುಲೈ-2024 ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು’ ಲಿಂಕ್ ಅನ್ನು ಹುಡುಕಬೇಕು. - ಇಂಡಿಯಾ ಪೋಸ್ಟ್ ಜಿಡಿಎಸ್ 2 ನೇ ಮೆರಿಟ್ ಪಟ್ಟಿ 2024 ಅನ್ನು ಬಿಡುಗಡೆ ಮಾಡಿದ ಪ್ರದೇಶಗಳ ಪಟ್ಟಿಯನ್ನು ನೋಡಲು ಸಾಧ್ಯ.
ಅರ್ಜಿ ಸಲ್ಲಿಸಿದ ಸರ್ಕಲ್ ಆಯ್ಕೆ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು. - ನಿಮ್ಮ ಆಯಾ ವಲಯಕ್ಕೆ ಮೆರಿಟ್ ಪಟ್ಟಿಯ ಪಿಡಿಎಫ್ ಡೌನ್ಲೋಡ್ ಮಾಡಬಹುದು.
ಅಭ್ಯರ್ಥಿಗಳ ಪಟ್ಟಿಯಲ್ಲಿ ‘Ctrl+F’ ಎಂಬ ಶಾರ್ಟ್‌ಕಟ್ ಬಳಸಿ ರೋಲ್ ನಂಬರ್ ಹಾಕಿ ಹುಡುಕಬಹುದು.