Saturday, 14th December 2024

ಮಾ.31 ರಂದು ‘ಇಂಡಿಯಾ’ ಬಣದಿಂದ ಮೆಗಾ ರ‍್ಯಾಲಿ

ವದೆಹಲಿ: ಪ್ರತಿಪಕ್ಷ ‘ಇಂಡಿಯಾ’ ಬಣವು ಮಾ.31 ರಂದು ಮೆಗಾ ರ‍್ಯಾಲಿ ನಡೆಸಲಿದೆ ಎಂದು ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಗೋಪಾಲ್ ರಾಯ್ ಭಾನುವಾರ ಪ್ರಕಟಿಸಿದ್ದಾರೆ.

ವಿರೋಧ ಪಕ್ಷಗಳು ಮುಖ್ಯಮಂತ್ರಿಯ ಬಂಧನದ ವಿರುದ್ಧ ಮಾತ್ರವಲ್ಲ, ಕೇಂದ್ರದ ಸರ್ವಾಧಿಕಾರಿ ಆಡಳಿತದ ವಿರುದ್ಧವೂ ಇವೆ” ಎಂದರು.

ಕಾಂಗ್ರೆಸ್ ಪಕ್ಷದ ಅರವಿಂದರ್ ಸಿಂಗ್ ಲವ್ಲಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಸಚಿವರು, ಸಿಎಂ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಮಾ. 31 ರಂದು ರಮೀಲಾ ಮೈದಾನದಲ್ಲಿ ಮೆಗಾ ರ್ಯಾಲಿ ನಡೆಸಲು ಯೋಜಿಸಿದ್ದಾರೆ ಎಂದು ಮಾಹಿತಿ ನೀಡಿದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ 10 ದಿನಗಳ ಕಾಲ ಅವರನ್ನು ಇಡಿ ವಶಕ್ಕೆ ನೀಡಿ ಆದೇಶಿಸಿತ್ತು. ಇದೀಗ ಇಡಿ ಬಂಧನ ಖಂಡಿಸಿ ವಿಪಕ್ಷಗಳ ನಾಯಕರ ಒಕ್ಕೂಟ ಇಂಡಿಯಾ ಬಣದಿಂದ ಮಾ.31ರಂದು ಪ್ರತಿಭಟನೆ ಕರೆ ನೀಡಲಾಗಿದೆ.