Sunday, 15th December 2024

ಏಳನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ ಉದ್ಘಾಟನೆ

ವದೆಹಲಿ: ಪ್ರಗತಿ ಮೈದಾನದ ‘ಭಾರತ ಮಂಟಪ’ದಲ್ಲಿ ಏಳನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ (ಐಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.

ದೇಶದಾದ್ಯಂತದ ಆಯ್ದ ಶಿಕ್ಷಣ ಸಂಸ್ಥೆಗಳಿಗೆ 100 ‘5ಜಿ ಲ್ಯಾಬ್‌’ ಗಳನ್ನು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿನ ದೈನಂದಿನ ಬದಲಾವಣೆಗಳೊಂದಿಗಿನ ಭವಿಷ್ಯ ಇಲ್ಲಿದೆ. ದೇಶದಲ್ಲಿ ನಾವು 5ಜಿ ಸೇವೆ ವಿಸ್ತರಿಸುವುದು ಮಾತ್ರವಲ್ಲದೆ 6ಜಿ ತಂತ್ರಜ್ಞಾನದಲ್ಲೂ ಮುಂಚೂಣಿಯತ್ತ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಅಧಿಕ ವೇಗದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸಲು ಉಪಗ್ರಹ ಆಧಾರಿತ ಭಾರತದ ಮೊದಲ ಗಿಗಾ ಫೈಬರ್‌ ಸೌಕರ್ಯವನ್ನು ಯಶಸ್ವಿ ಯಾಗಿ ಪ್ರದರ್ಶಿಸಲಾಗಿದೆ ಎಂದು ರಿಲಯನ್ಸ್ ಜಿಯೊ ಘೋಷಿಸಿದೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಜಿಯೊ ಸ್ಪೇಸ್ ಫೈಬರ್ ಸೇವೆಯನ್ನು ಅನಾವರಣಗೊಳಿಸಲಾಯಿತು. ಜಿಯೊ ಪೆವಿಲಿಯನ್‌ನಲ್ಲಿ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್‌ನ ಮುಖ್ಯಸ್ಥ ಆಕಾಶ್ ಅಂಬಾನಿ ಅವರು, ದೇಶೀಯ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು.

ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ (ಐಎಂಸಿ) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, ಅ27ರಿಂದ 29ರವರೆಗೆ ನಡೆಯುತ್ತಿದೆ