ನವದೆಹಲಿ: ನವೆಬರ್ (November) ತಿಂಗಳು ಭಾರತೀಯ ಆಟೋ ಮೊಬೈಲ್ (Indian Automobile) ಕ್ಷೇತ್ರಕ್ಕೆ ಶುಭ ತಿಂಗಳಾಗಿ ಪರಿಣಮಿಸಿದೆ. ಯಾಕೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವಂಬರ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ (Passenger vehicles) ಮಾರಾಟದಲ್ಲಿ 4.1 ಪ್ರತಿಶತ ಏರಿಕೆ ಕಂಡಿದೆ. ಭಾರತೀಯ ಆಟೋಮೊಬೈಲ್ ತಯಾರಕ ಸಂಘ (Indian Automobile Manufacturers (SIAM)) ಡಿ.13ರಂದು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಈ ಬಾರಿ ದೀಪಾವಳಿ ಹಬ್ಬ (Diwali festival) ನವೆಂಬರ್ ತಿಂಗಳಲ್ಲಿ ಬರದೇ ಹೋಗಿದ್ದರೂ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದ್ದು, ಒಂದೇ ತಿಂಗಳಲ್ಲಿ ದೇಶದಲ್ಲಿ 16.05 ಲಕ್ಷ ವಿವಿಧ ಕಂಪೆನಿಗಳ ದ್ವಿಚಕ್ರ ವಾಹನಗಳು ಮಾರಾಟಗೊಂಡಿವೆ. ಇದು ದೀಪಾವಳಿ ಹಬ್ಬವಲ್ಲದ ನವೆಂಬರ್ ತಿಂಗಳಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿರುವುದು ದಾಖಲೆಯಾಗಿದೆ
ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನ ಮತ್ತು ಪ್ರಯಾಣಿಕ ವಾಹನಗಳ ಒಟ್ಟು ಉತ್ಪಾದನೆ ನವಂಬರ್ ತಿಂಗಳಿನಲ್ಲಿ 24,07,351 ಯುನಿಟ್ ಗಳಾಗಿತ್ತು.
ಅಕ್ಟೋಬರ್ ತಿಂಗಳಿನ ಹಬ್ಬದ ಸೀಸನ್ ನಲ್ಲಿ ಉಂಟಾದ ಬೇಡಿಕೆ ನವಂಬರ್ ತಿಂಗಳಿಗೂ ಮುಂದುವರಿದ ಕಾರಣ ವಾಹನಗಳ ಮಾರಾಟದಲ್ಲಿ ಈ ದಾಖಲೆ ನಿರ್ಮಾಣವಾಗಲು ಕಾರಣವಾಯ್ತು ಎಂದು ಎಸ್.ಐ.ಎ.ಎಂ.ನ ಡೈರೆಕ್ಟರ್ ಜನರಲ್ ರಾಜೇಶ್ ಮೆನನ್ ಮಾಹಿತಿ ನೀಡಿದ್ದಾರೆ.
ಆಟೋ ತಯಾರಕರು ಬಿಡುಗಡೆಗೊಳಿಸಿದ ಮಾಹಿತಿಗಳ ಪ್ರಕಾರ ಈ ತಿಂಗಳ ಪ್ರಾರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಎಸ್.ಯು.ವಿ.ಗಳ (SUV) ಮಾರಾಟದಲ್ಲಿ ಏರಿಕೆ ಕಂಡಿದ್ದು, ಮಾರುತಿ ಸುಝುಕಿ ಇಂಡಿಯಾ ಲಿ. (Maruti Suzuki India Ltd), ಟಾಟಾ ಮೋಟಾರ್ಸ್ (Tata Motors) ಮತ್ತು ಟೊಯೊಟೋ ಕಿರ್ಲೋಸ್ಕರ್ (Toyota Kirloskar) ಕಂಪೆನಿಗಳ ಕಾರುಗಳ ಅತೀ ಹೆಚ್ಚಿನ ಮಾರಾಟವನ್ನು ನವಂಬರ್ ತಿಂಗಳಿನಲ್ಲಿ ಕಂಡಿದೆ.
ಮಾರುತಿ ಸುಝುಕಿ ಕಂಪನಿಯ ಪ್ಯಾಸೆಂಜರ್ ವಾಹನಗಳ ಮಾರಾಟ ಈ ನಂವಬರ್ ನಲ್ಲಿ 141,312 ಯುನಿಟ್ ಗಳಷ್ಟಿತ್ತು, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರುತಿ ಕಂಪೆನಿ 134,158 ಪ್ಯಾಸೆಂಜರ್ ವಾಹನಗಳ ಮಾರಾಟವನ್ನು ದಾಖಲಿಸಿತ್ತು. ಈ ಬಾರಿ ಪ್ರಮುಖ ಬೆಳವಣಿಗೆಯಾಗಿರುವುದು ಎಸ್.ಯು.ವಿ. ವಾಹನಗಳ ಮಾರಾಟದಲ್ಲಿ ಎಂದು ತಿಳಿದು ಬಂದಿದ್ದು, ಈ ಕಂಪೆನಿಯ ಬ್ರಿಝಾ, ಗ್ರ್ಯಾಂಡ್ ವಿಟಾರ ಮತ್ತು ಜಿಮ್ಮಿ ವಾಹನಗಳು ಒಟ್ಟು 59,003 ಯುನಿಟ್ ಮಾರಾಟಗೊಂಡಿದೆ. ಕಳೆದ ವರ್ಷ ಈ ಸಂಖ್ಯೆ 49,016 ಆಗಿತ್ತು.
ಇದನ್ನೂ ಓದಿ: D Gukesh: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್‌ಗೆ 5 ಕೋಟಿ ರೂ ನಗದು ಬಹುಮಾನ ಘೋಷಿಸಿದ ಎಂಕೆ ಸ್ಟಾಲಿನ್!
ಇನ್ನು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ನವಂಬರ್ ತಿಂಗಳಲ್ಲಿ 25.586 ಯುನಿಟ್ ಮಾರಾಟ ಕಂಡಿದ್ದರೆ, ಕಳೆದ ವರ್ಷದ 17.818 ಯುನಿಟ್ ಗಳಿಗೆ ಹೊಲಿಸಿದರೆ 44% ಏರಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ಕಂಪೆನಿಯು 1140 ಯುನಿಟ್ ಗಳನ್ನು ರಫ್ತು ಮಾಡಿದೆ.
‘ನಮ್ಮ ಕಂಪನಿಯ ವಾಹನಗಳಲ್ಲಿರು ವೈವಿಧ್ಯತೆ, ಮತ್ತು ಎಸ್.ಯು.ವಿ. ಆಯ್ಕೆಗಳು ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಸಹಕಾರಿಯಾದ ಕಾರಣ ಈ ಏರಿಕೆ ಕಂಡಿದೆ’ ಎಂದು ಟಿಕೆಎಂನ. ಮಾರಾಟ-ಸರ್ವಿಸ್-ಬಳಕೆ ಕಾರುಗಳ ವಿಭಾಗದ ಉಪಾಧ್ಯಕ್ಷ ಶಬರಿ ಮನೋಹರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. 2024ರಲ್ಲಿ ಕಂಪೆನಿಯ ನಿರೀಕ್ಷೆಗಳನ್ನು ಮೀರಿ ಮಾರಾಟ ದಾಖಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇದೇ ವೇಳೆ, ಟಾಟಾ ಮೋಟಾರ್ಸ್ ತನ್ನ ವಾಹನಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ 2% ಏರಿಕೆಯನ್ನು ದಾಖಲಿಸಿದೆ. ಈ ನವಂಬರ್ ತಿಂಗಳಿನಲ್ಲಿ ಟಾಟಾ ಒಟ್ಟು 47,117 ಯುನಿಟ್ ಗಳನ್ನು ಮಾರಾಟ ಮಾಡಿದೆ.