ನವದೆಹಲಿ: ಭಾರತೀಯ ಮುಸ್ಲಿಮರ (Indian Muslims) ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಭಾರತ ಹೇಳಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಂದು ಇರಾನ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಭಾರತೀಯ ಮುಸ್ಲಿಮರನ್ನು ಗಾಝಾದಲ್ಲಿರುವ ಮುಸ್ಲಿಮರೊಂದಿಗೆ ಹೋಲಿಸಲಾಗಿತ್ತು. ಮ್ಯಾನ್ಮಾರ್, ಗಾಝಾ ಅಥವಾ ಭಾರತದಲ್ಲಿನ ಮುಸ್ಲಿಮರು ಒಂದೇ ರೀತಿಯ ಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು.
Statement on Unacceptable Comments made by the Supreme Leader of Iran:https://t.co/Db94FGChaF pic.twitter.com/MpOFxtfuRO
— Randhir Jaiswal (@MEAIndia) September 16, 2024
“ಇರಾನ್ನ ಸರ್ವೋಚ್ಚ ನಾಯಕ ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ನೀಡಿದ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇವು ತಪ್ಪು ಮಾಹಿತಿ ಮತ್ತು ಸ್ವೀಕಾರಾರ್ಹವಲ್ಲ. ಅಲ್ಪಸಂಖ್ಯಾತರ ಬಗ್ಗೆ ಪ್ರತಿಕ್ರಿಯಿಸುವ ದೇಶಗಳು ಇತರರ ಬಗ್ಗೆ ಯಾವುದೇ ಅವಲೋಕನಗಳನ್ನು ಮಾಡುವ ಮೊದಲು ತಮ್ಮದೇ ದಾಖಲೆಗಳನ್ನು ನೋಡುವಂತೆ ಸೂಚಿಸಲಾಗಿದೆ ಎಂದು ನವದೆಹಲಿ ಹೇಳಿದೆ.
ಇದನ್ನೂ ಓದಿ: Narendra Modi : ಸ್ವಾರ್ಥ ಜನರು ಅಧಿಕಾರಕ್ಕಾಗಿ ಭಾರತವನ್ನುಒಡೆಯುತ್ತಿದ್ದಾರೆ, ಪ್ರತಿ ಪಕ್ಷಗಳಿಗೆ ಮೋದಿ ಚಾಟಿ
ಮ್ಯಾನ್ಮಾರ್, ಗಾಜಾ ಮತ್ತು ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಯಾತನೆಯನ್ನು ನಾವು ಮರೆತರೆ ನಾವು ನಮ್ಮನ್ನು ಮುಸ್ಲಿಮರೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಇರಾನಿನ ನಾಯಕ ಎಕ್ಸ್ ನಲ್ಲಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದರು.