ನವದೆಹಲಿ: ಇನ್ಮುಂದೆ ಎಕನಾಮಿಕ್ ಕ್ಲಾಸ್ 3, ಎಸಿ ಕೋಚ್‌ಗಳಲ್ಲಿ ಮಲಗುವ ಹಾಸಿಗೆ ವ್ಯವಸ್ಥೆ ಇರಲಿದೆ. ಇದೇ ಸೆ.20 ರಿಂದ ಸೌಲಭ್ಯಗಳು ಜಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಇಲಾಖೆಯು ಅನೇಕ ಕಡೆ 3ನೇ ದರ್ಜೆಯ ಎಸಿ ಕೋಚ್‌ಗಳನ್ನು ಹೆಚ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದೆ.
ಆದರೂ ಎಂದಿನಂತೆ ಸಾಮಾನ್ಯ ದರವೇ ಇರಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಪ್ರತಿ ಕಂಪಾರ್ಟ್ಮೆಂಟ್‌ನಲ್ಲೂ ಲೆನಿನ್ ಹಾಸಿಗೆ ಇರಿಸ ಲಾಗುತ್ತದೆ. ಆದರೆ ಬರ್ತ್ ಸಂಖ್ಯೆ 81, 82 ಮತ್ತು 83 ಬುಕ್ಕಿಂಗ್ ಆಗಿದ್ದ ಸಂದರ್ಭದಲ್ಲಿ ಈ ಸೌಲಭ್ಯ ಇರುವುದಿಲ್ಲ.
ಹೊರತಾಗಿ ಉಳಿದೆಲ್ಲ ಸಮಯಗಳಲ್ಲೂ ಹಾಸಿಗೆ ಸೌಲಭ್ಯ ಇರಲಿದೆ. ಸೆಪ್ಟೆಂಬರ್ 20ರಿಂದಲೇ ಈ ಸೌಲಭ್ಯ ಜಾರಿಗೆ ಬರಲಿದೆ.