ಬೆಂಗಳೂರು: ತ್ರಿಪುರಾದ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಮತ್ತು ಏಳು ಬೋಗಿಗಳು (Indian Railways) ಅಸ್ಸಾಂನ ದಿಬೋಲಾಂಗ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 3: 55 ರ ಸುಮಾರಿಗೆ ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ಅಥವಾ ದೊಡ್ಡ ಗಾಯಗಳ ಬಗ್ಗೆ ವರದಿಯಾಗಿಲ್ಲ. ಹಳಿ ತಪ್ಪಿದ ಬೋಗಿಗಳಲ್ಲಿ ರೈಲಿನ ಪವರ್ ಕಾರ್ ಕೂಡ ಸೇರಿದೆ.
Another Day, Another Derailment!
— Trains of India (@trainwalebhaiya) October 17, 2024
Agartala-Mumbai LTT AC Express derailed at Dibalong station at 1555 hrs. Details awaited…#trainaccident #IndianRailways pic.twitter.com/sq72Ec1DdG
12520 ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಇಂದು ಬೆಳಿಗ್ಗೆ ಅಗರ್ತಲಾದಿಂದ ಹೊರಟಿತು. ಅಸ್ಸಾಂನ ಲುಮ್ಡಿಂಗ್-ಬದರ್ಪುರ್ ಬೆಟ್ಟದ ಬಳಿ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಪರಿಹಾರ ರೈಲು ಮತ್ತು ಅಪಘಾತ ಪರಿಹಾರ ವೈದ್ಯಕೀಯ ರೈಲು ಈಗಾಗಲೇ ಲುಮ್ಡಿಂಗ್ ನಿಂದ ಅಪಘಾತದ ಸ್ಥಳಕ್ಕೆ ತೆರಳಿದೆ.
ಇದನ್ನೂ ಓದಿ:
ಅಧಿಕಾರಿಗಳು ಸದ್ಯಕ್ಕೆ ಲುಮ್ಡಿಂಗ್-ಬದರ್ಪುರ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.