ನವದೆಹಲಿ: ಇನ್ನು ಮುಂದೆ ಭಾರತೀಯ ರೈಲ್ವೆಯಲ್ಲಿ (Indian Railways) ಟಿಕೆಟ್ ಬುಕ್ ಮಾಡುವುದಕ್ಕೆ ಮೊದಲು ಯೋಚನೆ ಮಾಡುವುದು ಅಗತ್ಯ. ಯಾಕೆಂದರೆ ಹಿಂದಿನಂತೆ 120 ದಿನಗಳಿಗೆ ಟಿಕೆಟ್ ಬುಕಿಂಗ್ ಮಾಡುವುದು ಸಾಧ್ಯವಿಲ್ಲ. ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೆ ಘೋಷಿಸಿದ್ದು ಕೇವಲ 60 ದಿನಗಳ ಅವಧಿಗೆ ಮಾತ್ರ ಬುಕಿಂಗ್ ಮಾಡಬೇಕು.
ಹಿಂದಿನ 120 ದಿನಗಳ ಬುಕಿಂಗ್ ಅವಧಿಗೆ ಬದಲಾಗಿ ಪ್ರಯಾಣಿಕರು ಈಗ 60 ದಿನಗಳ ಮುಂಚಿತವಾಗಿ ಮಾತ್ರ ಟಿಕೆಟ್ ಕಾಯ್ದಿರಿಸಲು ಸಾಧ್ಯ. ಮುಂಗಡ ಕಾಯ್ದಿರಿಸುವಿಕೆಯ ಅವಧಿಯು ರೈಲು ನಿರ್ಗಮಿಸುವ ದಿನವನ್ನು ಹೊರತುಪಡಿಸಿ ಮುಂಗಡ ಬುಕಿಂಗ್ ಮಾಡಬಹುದಾಗಿದೆ.
ಹೊಸ ನಿಯಮವು ನವೆಂಬರ್ 1, 2024ರಿಂದ ಜಾರಿಗೆ ಬರಲಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ. ಆದಾಗ್ಯೂ, ಕೆಲವು ಹಗಲು-ಸಮಯದ ಎಕ್ಸ್ಪ್ರೆಸ್ ರೈಲುಗಳ ವಿಷಯದಲ್ಲಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಅಲ್ಲಿ ಮುಂಗಡ ಕಾಯ್ದಿರಿಸುವಿಕೆಗೆ ಕಡಿಮೆ ಸಮಯದ ಮಿತಿ ಪ್ರಸ್ತುತ ಅನ್ವಯಿಸುತ್ತದೆ.
ಇದನ್ನೂ ಓದಿ: Bahraich Unrest: ಬಹ್ರೈಚ್ ಹಿಂದೂ ಯುವಕನ ಹತ್ಯೆ ಕೇಸ್; ಪ್ರಮುಖ ಆರೋಪಿಯ ಎನ್ಕೌಂಟರ್
ವಿದೇಶಿ ಪ್ರವಾಸಿಗರಿಗೆ 365 ದಿನಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವರದಿಗಳ ಪ್ರಕಾರ, ಪ್ರತಿವರ್ಷ ಸುಮಾರು 30-35 ಕೋಟಿ ಪ್ರಯಾಣಿಕರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.