Friday, 22nd November 2024

Indian Railways: ರೈಲ್ವೆ ಟಿಸಿ, ಟಿಟಿಇ ನಡುವಿನ ವ್ಯತ್ಯಾಸವೇನು ಗೊತ್ತೇ?

Indian Railways

ಭಾರತೀಯ ರೈಲ್ವೇ (Indian Railways) ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಇಲಾಖೆಯಾಗಿದೆ. ಸಣ್ಣ ಅಥವಾ ದೀರ್ಘ ಪ್ರಯಾಣಕ್ಕಾಗಿ ಇದರ ಮೂಲಕ ಪ್ರತಿದಿನ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ. ಯಾಕೆಂದರೆ ಇದು ಹೆಚ್ಚಿನವರಿಗೆ ಅನುಕೂಲಕರವಾಗಿದೆ ಮತ್ತು ಬಜೆಟ್ ಸ್ನೇಹಿಯಾಗಿರುತ್ತದೆ. ರೈಲಿನಲ್ಲಿ ಹೆಚ್ಚಾಗಿ ಪ್ರಯಾಣಿಸುವವರು ಟಿಕೆಟ್ ತಪಾಸಣೆಗೆ ಬರುವವರನ್ನು ಖಂಡಿತ ನೋಡಿರುತ್ತಾರೆ. ಇದರಲ್ಲಿ ಟಿಕೆಟ್ ಕಲೆಕ್ಟರ್ (Ticket Collector ) ಮತ್ತು ಟಿಕೆಟ್ ಎಕ್ಸಾಮಿನರ್ (Ticket Examiner) ಇರುತ್ತಾರೆ. ಆದರೆ ಇವರ ನಡುವಿನ ವ್ಯತ್ಯಾಸ ಏನು ಗೊತ್ತೇ?

Indian Railways

ಜವಾಬ್ದಾರಿಗಳು ಏನು?

ಟಿಟಿಇ ಅಂದರೆ ಟಿಕೆಟ್ ಟ್ರಾವೆಲಿಂಗ್ ಎಕ್ಸಾಮಿನರ್. ಮುಖ್ಯವಾಗಿ ರೈಲಿನಲ್ಲಿ ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ. ಪ್ರಯಾಣಿಕರು ಸರಿಯಾದ ಸ್ಥಳಗಳಲ್ಲಿ ಕುಳಿತಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅವರ ಗುರುತನ್ನು ಪರಿಶೀಲಿಸುತ್ತಾರೆ.

ಟಿಸಿ ಅಂದರೆ ಟಿಕೆಟ್ ಕಲೆಕ್ಟರ್. ಮುಖ್ಯವಾಗಿ ಪ್ಲಾಟ್‌ಫಾರ್ಮ್‌ ಮತ್ತು ನಿಲ್ದಾಣದ ಆವರಣದಲ್ಲಿ ಕೆಲಸ ಮಾಡುತ್ತಾರೆ. ರೈಲು ಹತ್ತುವ ಮುನ್ನ ಪ್ರಯಾಣಿಕರ ಟಿಕೆಟ್ ಪರಿಶೀಲಿಸುವುದು ಇವರ ಜವಾಬ್ದಾರಿಯಾಗಿದೆ.

Indian Railways

ಇವರನ್ನು ಗುರುತಿಸುವುದು ಹೇಗೆ?

ಟಿಟಿಇಗಳು ಸಾಮಾನ್ಯವಾಗಿ ಕಪ್ಪು ಕೋಟ್‌ ಧರಿಸಿರುತ್ತಾರೆ. ಹೆಸರು ಮತ್ತು ಪದನಾಮ ಹೊಂದಿರುವ ಬ್ಯಾಡ್ಜ್‌ಗಳನ್ನು ಹಾಕಿರುತ್ತಾರೆ. ಟಿಟಿಇಗಳು ಪ್ರಯಾಣದ ಉದ್ದಕ್ಕೂ ನೇರವಾಗಿ ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಾರೆ. ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸುತ್ತಾರೆ ಮತ್ತು ಪ್ರಯಾಣ ನಿಯಮಗಳ ಪಾಲನೆಯಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

Unique Tradition: ಈ ನಗರದ ಗಡಿಯಾರದಲ್ಲಿ 12 ಸಂಖ್ಯೆಯೇ ಇಲ್ಲ!

ಟಿಸಿಗಳು ಬೋರ್ಡಿಂಗ್ ಪ್ರಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಎಲ್ಲಾ ಪ್ರಯಾಣಿಕರು ರೈಲು ಹತ್ತುವ ಮೊದಲು ಟಿಕೆಟ್‌ಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.