Thursday, 12th December 2024

ಜ.14ರಂದು 23 ಭಾರತೀಯ ನಾವೀಕರು ಸ್ವದೇಶಕ್ಕೆ

ನವದೆಹಲಿ: ಇದೇ ಜನವರಿ ತಿಂಗಳ 14ರಂದು ಚೀನಾದಲ್ಲಿ ಸಿಲುಕಿರುವ 23 ಭಾರತೀಯ ನಾವೀಕರು ದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಚೀನಾದಲ್ಲಿ ಸಿಲುಕಿದ್ದ 23 ಭಾರತೀಯ ನಾವೀಕರಿದ್ದ ಸರಕು ಹಡಗು ಜಪಾನ್‌ನ ಚಿಬಾ ಕಡೆಗೆ ಪ್ರಯಾಣಿಸಲು ಸಜ್ಜಾಗಿದ್ದು, ಜ.14 ರಂದು ದೇಶಕ್ಕೆ ಮರಳಲಿದ್ದಾರೆ ಎಂದು ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಭಾರತೀಯ ನಾವಿಕರಿರುವ ಎರಡು ಹಡಗುಗಳು ತಮ್ಮ ಸರಕುಗಳನ್ನು ಇಳಿಸಲು ಅನುಮತಿಸದ ಕಾರಣ ಚೀನಾದ ಬಂದರು ಗಳಲ್ಲಿ ಲಂಗರು ಹಾಕಿವೆ. ಕಳೆದ ಆರು ತಿಂಗಳು ತಿಂಗಳಿನಿಂದ ಚೀನಾದಲ್ಲಿ ಸಿಲುಕಿರುವ ನಾವೀಕರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಸಚಿವರು, ಇದಕ್ಕಾಗಿ, ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ನಾವಿಕರು ಶೀಘ್ರದಲ್ಲಿಯೇ ದೇಶಕ್ಕೆ ಮರಳಲಿದ್ದಾರೆ ಎಂದರು.

ಚೀನೀ ಬಂದರುಗಳಲ್ಲಿ ಸಿಲುಕಿರುವ ಭಾರತೀಯ ಹಡಗು ಸಿಬ್ಬಂದಿ ಮತ್ತು ಭಾರತ-ಆಸ್ಟ್ರೇಲಿಯಾದೊಂದಿಗಿನ ಸಂಬಂಧಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಡಿಸೆಂಬರ್ 25 ರಂದು ಚೀನಾ ಹೇಳಿತ್ತು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಸಿಬ್ಬಂದಿಗಳ ಮೇಲೆ ಸಾಕಷ್ಟು ಒತ್ತಡವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದರು.

ಎಂ.ವಿ.ಜಗ್ ಆನಂದ್ ಸರಕು ಹಡಗು ಜೂನ್ 13 ರಿಂದ ಚೀನಾದ ಹೆಬೈ ಪ್ರಾಂತ್ಯದ ಜಿಂಗ್ಟಾಂಗ್ ಬಂದರಿನ ಬಳಿ ಲಂಗರು ಹಾಕಿದ್ದು, ಅದರಲ್ಲಿ 23 ಭಾರತೀಯ ನಾವೀಕರು ಇದ್ದಾರೆ. ಚೀನಾದಲ್ಲಿರುವ ಭಾರತೀಯ ರಾಯಭಾರಿಗಳು, ಚೀನಾ ಸರ್ಕಾರ ದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯ ನೆರವು ಒದಗಿಸುವುದಾಗಿ ಚೀನಾ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದರು.