Saturday, 23rd November 2024

ಎರಡು ಹಡಗುಗಳ ರಕ್ಷಣೆ, 17 ಸಿಬ್ಬಂದಿಯ ಪಾರು

ವದೆಹಲಿ: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕಡಲ್ಗಳ್ಳರಿಂದ ಎರಡು ಹಡಗುಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಒಂದು ಹಡಗಿ ನಿಂದ 19 ಪಾಕಿಸ್ತಾನಿಗಳನ್ನು ಮತ್ತು ಇನ್ನೊಂದು ಹಡಗಿನಿಂದ 17 ಸಿಬ್ಬಂದಿಯನ್ನು ರಕ್ಷಿಸಿದೆ.

ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ ಇರಾನ್ ಹಡಗು ಎಫ್‌ಬಿ ಇರಾನ್ ಅನ್ನು ಹೈಜಾಕ್ ಆಗದಂತೆ ರಕ್ಷಿಸಿತು. ಬಳಿಕ ಅರಬ್ಬಿ ಸಮುದ್ರ ದಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸಿ, ಅಲ್ ನೈಮಿ ಎಂಬ ಹಡಗನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಿಸಲಾಗಿದೆ. ಈ ಕಾರ್ಯಾ ಚರಣೆಯಲ್ಲಿ ಭಾರತೀಯ ಮೆರೈನ್ ಕಮಾಂಡೋಗಳು ಭಾಗವಹಿಸಿದ್ದರು.

ಐಎನ್‌ಎಸ್ ಸುಮಿತ್ರಾ ಎರಡನೇ ಯಶಸ್ವಿ ಆಂಟಿ ಪೈರಸಿ ಕಾರ್ಯಾಚರಣೆಯನ್ನು ನಡೆಸಿತು. ಈ ಕಾರ್ಯಾಚರಣೆಯಲ್ಲಿ, 19 ಸಿಬ್ಬಂದಿ ಮತ್ತು ಹಡಗನ್ನು ಶಸ್ತ್ರಸಜ್ಜಿತ ಸೊಮಾಲಿ ಕಡಲ್ಗಳ್ಳರಿಂದ ರಕ್ಷಿಸಲಾಯಿತು.

ಭಾರತೀಯ ನೌಕಾಪಡೆಯು ಸೊಮಾಲಿ ಕಡಲ್ಗಳ್ಳರ ಗುರಿಯಲ್ಲಿದ್ದ ಮೀನುಗಾರಿಕಾ ಹಡಗುಗಳನ್ನು ರಕ್ಷಿಸುತ್ತಿರುವುದು ಇದೇ ಮೊದಲಲ್ಲ. ಜ.5 ರಂದು ಐಎನ್‌ಎಸ್ ಚೆನ್ನೈ ಸೊಮಾಲಿಯಾ ಕರಾವಳಿಯಲ್ಲಿ ಹಡಗಿನ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಿತು ಮತ್ತು ಹಡಗಿನಲ್ಲಿದ್ದ ಎಲ್ಲಾ 15 ಭಾರತೀಯ ರನ್ನು ರಕ್ಷಿಸಿತು. ಈ ಕಾರ್ಯಾಚರಣೆಯನ್ನು ಮೆರೈನ್ ಕಮಾಂಡೋಸ್ (ಮಾರ್ಕೋಸ್) ನಡೆಸಿದರು.