Thursday, 12th December 2024

ವಿಮಾನ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಗುವಾಹಟಿ: ದಿಬ್ರುಗಢಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಭಾನುವಾರ ಗುವಾ ಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಮತ್ತು ಇಬ್ಬರು ಭಾರ ತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ರಾದ ಪ್ರಶಾಂತ ಫುಕನ್ ಮತ್ತು ತೆರಾಶ್ ಗೊವಾಲ್ಲಾ ಅವರು ಗುವಾಹಟಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಾಗ ವಿಮಾನದಲ್ಲಿದ್ದರು.

‘ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಅವರು ಇನ್ನೂ ಗುವಾಹಟಿ ವಿಮಾನ ನಿಲ್ದಾಣದಲ್ಲಿದ್ದಾರೆ’ ಎಂದು ಮಾಧ್ಯಮಗಳು ತಿಳಿಸಿವೆ.

‘ನಾನು ಬಿಜೆಪಿ ಶಾಸಕರಾದ ಪ್ರಶಾಂತ ಫುಕನ್ ಮತ್ತು ತೆರಾಶ್ ಗೊವಾಲ್ಲಾ ಅವರೊಂದಿಗೆ ವಿಮಾನದಲ್ಲಿದ್ದೆ. ಇಂದು ದುಲಿಯಾಜನ್, ಟಿಂಗ್‌ಕಾಂಗ್ ಮತ್ತು ಟಿನ್ಸುಕಿಯಾದಲ್ಲಿ ಮೂರು ಸಭೆಗಳ ವೇಳಾಪಟ್ಟಿಯನ್ನು ಹೊಂದಿದ್ದೇನೆ. ದಿಬ್ರುಗಢ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಮೊದಲು ವಿಮಾನವು 15 ರಿಂದ 20 ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಗುವಾಹಟಿ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ’ ಎಂದಿದ್ದಾರೆ.