ನವದೆಹಲಿ: ಪ್ರಧಾನಿ ಇಂದಿರಾ ಗಾಂಧಿ ಹಂತಕರ ಪುತ್ರ ಸರಬ್ಜಿತ್ ಸಿಂಗ್ (45) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನ ಫರಿದ್ಕೋಟ್ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ.
ಸರಬ್ಜಿತ್ ಸಿಂಗ್ ಇಂದಿರಾ ಗಾಂಧಿ ಹಂತಕರಲ್ಲಿ ಒಬ್ಬರಾದ ಬಿಯಾಂತ್ ಸಿಂಗ್ ಅವರ ಪುತ್ರ.
1984ರ ಅಕ್ಟೋಬರ್ 31ರಂದು ಸತ್ವಂತ್ ಸಿಂಗ್ ಜೊತೆಗೂಡಿ ಬಿಯಾಂತ್ ಸಿಂಗ್ ಇಂದಿರಾ ಗಾಂಧಿಯವರನ್ನು ಗುಂಡಿಕ್ಕಿ ಕೊಂದಿದ್ದ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಫರಿದ್ಕೋಟ್‌ನ ಹಲವಾರು ಜನರು ಮನವಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸರಬ್ಜಿತ್ ಹೇಳುತ್ತಾರೆ. ಆಮ್ ಆದ್ಮಿ ಪಕ್ಷವು ಕರಮ್ಜಿತ್ ಅನ್ಮೋಲ್ ರನ್ನು ಈ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಕರಮ್ಜಿತ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಪ್ತರೆಂದು ಪರಿಗಣಿಸಲಾಗಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುಹಮ್ಮದ್ ಸಾದಿಕ್ ಈ ಸ್ಥಾನವನ್ನು ಗೆದ್ದರು. 2014ರಲ್ಲಿ ಶಿರೋಮಣಿ ಅಕಾಲಿ ದಳ, 2009ರಲ್ಲಿ ಪರಮ್ಜಿತ್ ಕೌರ್ ಗುಲ್ಶನ್ ಶಿರೋಮಣಿ ಅಕಾಲಿ ದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ 2004ರಲ್ಲಿ ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು.