Thursday, 12th December 2024

ಪ್ರಧಾನಿ ಮೋದಿ-ಶೇಖ್ ಹಸೀನಾರಿಂದ ಭಾರತ-ಬಾಂಗ್ಲಾ ನಡುವಿನ ರೈಲು, ವಿದ್ಯುತ್ ಯೋಜನೆಗಳ ಜಂಟಿ ಉದ್ಘಾಟನೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಬುಧವಾರ ವಿಡಿಯೋ ಕಾನ್ಫ ರೆನ್ಸಿಂಗ್ ಮೂಲಕ ಮೂರು ಭಾರತೀಯ ನೆರವಿನ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು.

ಅಖೌರಾ- ಅಗರ್ತಲಾ ಕ್ರಾಸ್-ಬಾರ್ಡರ್ ರೈಲ್ ಲಿಂಕ್, ಖುಲ್ನಾ- ಮೊಂಗ್ಲಾ ಪೋರ್ಟ್ ರೈಲು ಮಾರ್ಗ ಮತ್ತು ಬಾಂಗ್ಲಾದೇಶದ ರಾಂಪಾಲ್‌ನಲ್ಲಿರುವ ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ನ ಘಟಕ – II ಮೂರು ಯೋಜನೆಗಳಾಗಿವೆ.

“ಈ ಮಹತ್ವದ ಯೋಜನೆಗಳ ಜಂಟಿ ಉದ್ಘಾಟನೆಯು ನಮ್ಮ ಎರಡು ದೇಶಗಳ ನಡುವಿನ ದೃಢವಾದ ಸ್ನೇಹ ಮತ್ತು ಸಹಯೋಗ ವನ್ನು ವ್ಯಕ್ತಪಡಿಸುತ್ತದೆ. ನಾನು ಸೆಪ್ಟೆಂಬರ್ 2023 ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ನನ್ನ ಭೇಟಿಯ ಸಂದರ್ಭದಲ್ಲಿ ಆತಿಥ್ಯಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದರು.

“ನಮ್ಮ ಎರಡು ದೇಶಗಳ ನಡುವಿನ ಸ್ನೇಹದ ಬಂಧಗಳನ್ನು ಬಲಪಡಿಸುವ ನಿಮ್ಮ ಬದ್ಧತೆಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ” ಎಂದು ಶೇಖ್ ಹಸೀನಾ ಹೇಳಿದರು.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ರೈಲು ಮತ್ತು ವಿದ್ಯುತ್ ಕ್ಷೇತ್ರದ ಯೋಜನೆಗಳ ಉದ್ಘಾಟನೆಯು ಉಭಯ ದೇಶಗಳ ನಡುವಿನ ಬಲವರ್ಧಿತ ಬಾಂಧವ್ಯ ಮತ್ತು ಪಾಲುದಾರಿಕೆಯ ಮೇಲೆ ಕೇಂದ್ರೀಕರಿಸಿದೆ.