Thursday, 12th December 2024

ಪಠಾಣ್‌ಕೋಟ್‌: ಒಳನುಸುಳುವಿಕೆ ವಿಫಲಗೊಳಿಸಿದ ಬಿಎಸ್’ಎಫ್

ಚಂಡೀಗಡ: ಪಂಜಾಬ್‌ನ ಪಠಾಣ್‌ಕೋಟ್‌ ಜಿಲ್ಲೆಯಲ್ಲಿರುವ ಅಂತರ ರಾಷ್ಟ್ರೀಯ ಗಡಿ ಮೂಲಕ ದೇಶದೊಳಗೆ ಪ್ರವೇಶಿಸುವ ಪಾಕಿಸ್ತಾನದ ಮೂವರು ನುಸುಳುಕೋರರ ಯತ್ನವನ್ನು ಬಿಎಸ್‌ಎಫ್‌ ವಿಫಲಗೊಳಿಸಿದೆ ಎಂದು ವರದಿ ಯಾಗಿದೆ.

ಬುಧವಾರ ರಾತ್ರಿ ಗಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದುದನ್ನು ಪಹರಿಪುರ ಗಡಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಪಡೆ  ಯೋಧರು, ಗಮನಿಸಿದರು. ನಂತರ ಗುಂಡು ಹಾರಿಸಿ, ಒಳನುಸುಳುವ ಅವರ ಯತ್ನವನ್ನು ವಿಫಲಗೊಳಿಸಿ ದರು ಎಂದು ಅಧಿಕಾರಿಗಳು ಹೇಳಿದರು.

ಬಿಎಸ್‌ಎಫ್‌ ಯೋಧರು ಹಾಗೂ ಪಂಜಾಬ್‌ ಪೊಲೀಸರು ಆ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದೂ ಅಧಿಕಾರಿಗಳು ಹೇಳಿದರು.