Sunday, 15th December 2024

ಇನ್ಫೋಸಿಸ್: 600 ಹೊಸ ಉದ್ಯೋಗಿಗಳ ವಜಾ

infosys

ವದೆಹಲಿ: ಇನ್ಫೋಸಿಸ್ ಸುಮಾರು 600 ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.

ಹೊಸ ಉದ್ಯೋಗಿಗಳನ್ನು ಆಂತರಿಕ ಫ್ರೆಶರ್ ಮೌಲ್ಯಮಾಪನ (ಎಫ್‌ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಆಗಸ್ಟ್ 2022 ರಲ್ಲಿ ಕಂಪನಿಗೆ ಕೆಲಸಕ್ಕೆ ಸೇರಿದ ಉದ್ಯೋಗಿ ಈ ಬಗ್ಗೆ ಮಾತನಾಡಿದ್ದು, ‘ನಾನು ಕಳೆದ ವರ್ಷ ಆಗಸ್ಟ್‌ನಲ್ಲಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ನನಗೆ SAP ABAP ಸ್ಟ್ರೀಮ್‌ಗಾಗಿ ತರಬೇತಿ ನೀಡಲಾಯಿತು.

ನನ್ನ ತಂಡದಲ್ಲಿದ್ದ 150 ಮಂದಿಯಲ್ಲಿ 60 ಮಂದಿ ಮಾತ್ರ ಎಫ್‌ಎ ಪರೀಕ್ಷೆಯಲ್ಲಿ ತೇರ್ಗಡೆ ಯಾಗಿದ್ದಾರೆ. ಉಳಿದಂತೆ ನಮ್ಮೆಲ್ಲರನ್ನೂ ಎರಡು ವಾರಗಳ ಹಿಂದೆ ವಜಾ ಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಎರಡು ವಾರಗಳ ಹಿಂದೆ, ಎಫ್‌ಎ ಪರೀಕ್ಷೆಯಲ್ಲಿ ವಿಫಲರಾದ ನಂತರ 208 ಫ್ರೆಶರ್‌ಗಳನ್ನು ವಜಾಗೊಳಿಸಲಾಯಿತು.