ಇದು ವಿಶಾಖಪಟ್ಟಣಂ ದರ್ಜೆಯ ಗುಪ್ತ ಕ್ಷಿಪಣಿ ನಾಶಕ ನೌಕೆ. ಇದರ ಸೇರ್ಪಡೆ ಬಳಿಕ ಇನ್ನೂ ಕೆಲವು ಪರೀಕ್ಷಾರ್ಥ ಪ್ರಯೋಗ ಗಳನ್ನು ನಡೆಸಲಿದ್ದೇವೆ ಎಂದು ಕಮಾಂಡಿಂಗ್ ಅಧಿಕಾರಿ ಕ್ಯಾ.ಬೀರೇಂದರ್ ಸಿಂಗ್ ಬೈನ್ಸ್ ಹೇಳಿದ್ದಾರೆ.
- ಐಎನ್‌ಎಸ್ ವಿಶಾಖಪಟ್ಟಣಂ ಉದ್ದ-164 ಮೀ.
- ಅಂದಾಜು ತೂಕ – 7,500 ಟನ್
- ನೌಕೆಯ ಎಷ್ಟು ಭಾಗಗಳು ಸ್ವದೇಶಿ ನಿರ್ಮಿತ?- 75%
- ನೌಕೆಯಲ್ಲಿ ಎಷ್ಟು ಸಿಬಂದಿ ಇರಬಹುದು? 312
- ಸಂಚಾರದ ವೇಗ 55 ಕಿ.ಮೀ.
- ಹೆಲಿಕಾಪ್ಟರ್‌ಗಳ ಸಂಖ್ಯೆ- 2
ಅಳವಡಿಸಲಾಗಿರುವ ಶಸ್ತ್ರಾಸ್ತ್ರಗಳು : ಬೆಂಗಳೂರಿನ ಬಿಇಎಲ್ ನಿರ್ಮಿತ ಮಧ್ಯಮ ವ್ಯಾಪ್ತಿಯ ನೆಲದಿಂದ ಗಗನಕ್ಕೆ ಚಿಮ್ಮಬಲ್ಲ ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್ ಏರೋ ಸ್ಪೇಸ್‌ನ ಕ್ಷಿಪಣಿಗಳು, ಟಾರ್ಪೆಡೋ ಟ್ಯೂಬ್ ಗಳು ಮತ್ತು ಲಾಂಚರ್‌ಗಳು, ಬಿಎಚ್‌ಇಎಲ್ ನಿರ್ಮಿತ ಗನ್ ಮೌಂಟ್‌ಗಳು, ಜಲಾಂತರ್ಗಾಮಿ ನಿಗ್ರಹ ರಾಕೆಟ್‌ಗಳು, ಸೆನ್ಸರ್‌ಗಳು.
ಐಎನ್‌ಎಸ್ ವಿಶಾಖಪಟ್ಟಣಂ ಹಾಗೂ 28ರಂದು ಸೇರ್ಪಡೆಗೊಳ್ಳಲಿರುವ ವೇಲಾ ಜಲಾಂತರ್ಗಾಮಿ ನೌಕೆಯು ಭಾರತದ ಸಂಕೀರ್ಣ ಸಮರ ನೌಕೆಗಳ ನಿರ್ಮಾಣ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ.