Thursday, 12th December 2024

ಮಾ.15ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭ

ನವದೆಹಲಿ: ಭಾರತದಲ್ಲಿ ಮಾ.15ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಪುನಾರಂಭಗೊಳ್ಳಲಿದೆ.

ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನಂತೆ ವಿದೇಶಿ ವಿಮಾನಗಳು ನಡೆಸಬಹುದಾಗಿದೆ.

ಆರೋಗ್ಯ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಚರ್ಚೆ ನಡೆಸಿ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿ ಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಫೆ.14ರಂದು ಜಾರಿಗೆ ಬಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ಮಾರ್ಗಸೂಚಿಯನ್ನು ಮಾ.15ರ ಬಳಿಕವೂ ಪಾಲಿಸಬೇಕಾಗಿದೆ.

ಮಾ.23 2020ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗುತ್ತು. ಆದರೆ ವಂದೇ ಭಾರತ್‌ ಮಿಷನ್‌, ಏರ್‌ ಬಬಲ್‌ ವ್ಯವಸ್ಥೆಯ ಮೂಲಕ ವಿಶ್ವದ 40ಕ್ಕೂ ಹೆಚ್ಚು ರಾಷ್ಟ್ರಗಳ ನಡುವೆ ವಿಮಾನಗಳ ಸೇವೆ ಕಾರ್ಯಾರಂಭಿಸಿತು.