ನವದೆಹಲಿ: ಅಮೆಜಾನ್, ರೆಡ್ಇಟ್, ಸಿಎನ್ಎನ್, ಟ್ವಿಚ್, ಪೇಪಾಲ್, ಟಿಕೆಟ್ ಮಾಸ್ಟರ್ ಮತ್ತು ಯುಕೆ ಸರ್ಕಾರಿ ವೆಬ್ಸೈಟ್ಗಳು ಮಂಗಳವಾರ ಜಾಗತಿಕವಾಗಿ ಇಂಟರ್ನೆಟ್ ಸಮಸ್ಯೆ ಎದುರಿಸಿದೆ.
ಜೊತೆಗೆ ದಿ ಗಾರ್ಡಿಯನ್, ಫೈನಾನ್ಷಿಯಲ್ ಟೈಮ್ಸ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಸುದ್ದಿ ಸಂಸ್ಥೆಗಳಿಗೂ ಕೂಡ ಇಂಟರ್ನೆಟ್ ಅಭಾವವಾಗಿದೆ. ಲಕ್ಷಾಂತರ ಜನರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದಾರೆ.
ಸದ್ಯ ಕರೋನಾ ಕಾಲದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಹೀಗಿರುವಾಗ ಇಂದಿನ ಜಾಗತಿಕವಾಗಿ ಇಂಟರ್ನೆಟ್ ಅಭಾವದಿಂದ ಪ್ರಮುಖ ವೆಬ್ಸೈಟ್ ಮತ್ತು ಸುದ್ದಿ ಪ್ರಕಟಿಸುವ ಸೈಟ್ಗಳು ಕೊಂಚ ನಷ್ಟ ಅನುಭವಿಸಿದೆ.
ವಿಷಯ ವಿತರಣಾ ನೆಟ್ವರ್ಕ್ (ಸಿಡಿಎನ್) ವಿಚಾರಕ್ಕೆ ಸಂಬಂಧಿಸಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದು ಪ್ರಾಕ್ಸಿ ಸರ್ವರ್ಗಳ ನೆಟ್ವರ್ಕ್ ಮತ್ತು ವಿಶಾಲವಾಗಿ ಡೇಟಾವನ್ನು ವಿತರಿಸುತ್ತದೆ. ಆದರೆ ಇದರಿಂದ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹಲವಾರು ಜನಪ್ರಿಯ ಸೈಟ್ಗಳು ಜಾಗತಿಕವಾಗಿ ಇಂಟರ್ನೆಟ್ ಸಮಸ್ಯೆಯನ್ನುಎದುರಿಸಿವೆ.
ಉತ್ತರ ಅಮೆರಿಕಾ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದಲ್ಲಿ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದೆ.
ಫೈನಾನ್ಶಿಯಲ್ ಟೈಮ್ಸ್, ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಬ್ಲೂಮ್ ಬರ್ಗ್ ನ್ಯೂಸ್ ಸೇರಿದಂತೆ ಬಹುತೇಕ ಸುದ್ದಿ ವಾಹಿನಿ ವೆಬ್ಸೈಟ್ಗಳು ಜಗತ್ತಿನಾದ್ಯಂತ ಏಕಾಏಕಿ ಸ್ಥಗಿತಗೊಂಡಿವೆ. ಅಮೆಜಾನ್.ಕಾಮ್ ವೆಬ್ಸೈಟ್ ಕೂಡ ತಾಂತ್ರಿಕ ದೋಷವನ್ನ ಎದುರಿಸಿದೆ.