ಭಯೋತ್ಪಾದಕ ಗುಂಪಿನ ಗ್ರೌಂಡ್ ವರ್ಕರ್‌ಗೆ ದಾಖಲೆಗಳನ್ನ ಹಸ್ತಾಂತ ರಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಸಂಸ್ಥೆಯ ಅಧಿಕೃತ ವಕ್ತಾರ ತಿಳಿಸಿ ದ್ದಾರೆ. 2011ರ ಐಪಿಎಸ್ ಬ್ಯಾಚ್‌ನಲ್ಲಿ ಬಡ್ತಿ ಪಡೆದ ಪೊಲೀಸ್ ಅಧಿಕಾರಿ ಯನ್ನ ಕಳೆದ ವರ್ಷ ನವೆಂಬರ್ 6 ರಂದು ಎನ್‌ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಯೋಜನೆ ಮತ್ತು ಕಾರ್ಯ ಗತಗೊಳಿಸಲು ಸಹಾಯ ಮಾಡಲು ನಿಷೇಧಿತ ಲಷ್ಕರ್-ಎ-ತೊಯ್ಬಾದ ಗ್ರೌಂಡ್ ವರ್ಕ್ ಜಾಲದ ಪ್ರಸರಣಕ್ಕೆ ಈ ಪ್ರಕರಣವು ಸಂಬಂಧಿಸಿದೆ. ತನಿಖೆಯ ಸಂದರ್ಭದಲ್ಲಿ, ಶಿಮ್ಲಾದಲ್ಲಿ ನಿಯೋಜನೆ ಗೊಂಡಿದ್ದ ಎಡಿ ನೇಗಿ, ಐಪಿಎಸ್ ಪಾತ್ರವನ್ನು ಪರಿಶೀಲಿಸಲಾಗಿದೆ ಮತ್ತು ಅವರ ಮನೆಯನ್ನು ಶೋಧಿಸಲಾಗಿದೆ.
ಪ್ರಕರಣದಲ್ಲಿ ಲಷ್ಕರ್-ಎ-ತೊಯ್ಬಾದ ಓಜಿಡಬ್ಲ್ಯೂ ಆಗಿರುವ ಇನ್ನೊಬ್ಬ ಆರೋಪಿಗೆ ಎಡಿ ನೇಗಿಯಿಂದ ಎನ್‌ಐಎಯ ಅಧಿಕೃತ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿರುವುದು ಕಂಡುಬಂದಿದೆ.