Sunday, 6th October 2024

Iran Attacks Israel : ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು; ಇಸ್ರೇಲ್‌ ಮೇಲೆ 400 ಕ್ಷಿಪಣಿಗಳ ದಾಳಿ ನಡೆಸಿದ ಇರಾನ್‌

Iran Attacks Israel

ಬೆಂಗಳೂರು: ಹೆಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿದೆ. ಇರಾನ್ ಇಸ್ರೇಲ್ ಕಡೆಗೆ 400 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿಸದೆ. ಇದು ದೇಶಾದ್ಯಂತ ಸೈರನ್‌ಗಳು ಮೊಳಗುವಂತೆ ಮಾಡಿದೆ. ಈ ಕ್ಷಿಪಣಿ ದಾಳಿಗಳನ್ನು ಎದುರಿಸಿದ್ದೇವೆ ಎಂಬುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ.

ರಾಕೆಟ್‌ಗಳು ಆಕಾಶದಲ್ಲಿ ಹಾರಾಡುತ್ತಿದ್ದಂತೆ, ಒಳಬರುವ ಕ್ಷಿಪಣಿಗಳನ್ನು ತಡೆಯಲು ಇಸ್ರೇಲಿ ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿವೆ. ಈ ದಾಳಿಯು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಅದೇ ರೀತಿ ಅಮೆರಿಕ ಕೂಡ ಇರಾನ್‌ಗೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ “ತೀವ್ರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ಇರಾನ್‌ನಿಂದ ಇಸ್ರೇಲ್ ರಾಜ್ಯದ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇಸ್ರೇಲಿಗಳಿಗೆ ಜಾಗರೂಕರಾಗಿರಲು ಮತ್ತು ಹೋಮ್ ಫ್ರಂಟ್ ಕಮಾಂಡ್‌ಗೆ ಸೂಚನೆಗಳ ನೀಡಲಾಗಿದೆ. ಕಳೆದ ಕೆಲವು ನಿಮಿಷಗಳಲ್ಲಿ ಹೋಮ್ ಫ್ರಂಟ್ ಕಮಾಂಡ್ ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಜೀವ ರಕ್ಷಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಹೇಳಿ” ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಲಕ್ಷಾಂತರ ಇಸ್ರೇಲಿಗಳು ಪ್ರಸ್ತುತ ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಇಸ್ಮಾಯಿಲ್ ಹನಿಯೆಹ್, ಹಸನ್ ನಸ್ರಲ್ಲಾ ಮತ್ತು ನಿಲ್ಪೊರುಷಾನ್‌ ವಿರುದ್ಧ ಪ್ರತೀಕಾರ: ಇರಾನ್

ಇಸ್ರೇಲ್ ವಿರುದ್ಧ ದಾಳಿಯನ್ನು ಪ್ರಾರಂಭಿಸಿದ ನಂತರ ಇರಾನ್ ಅಧಿಕೃತ ಹೇಳಿಕೆಯಲ್ಲಿ, “ಇಸ್ಮಾಯಿಲ್ ಹನಿಯೆಹ್, ಸಯ್ಯದ್ ಹಸನ್ ನಸ್ರಲ್ಲಾ ಮತ್ತು ಹುತಾತ್ಮ ನಿಲ್ಫೊರುಶಾನ್ ಅವರ ನಿಧನಕ್ಕೆ ಪ್ರತಿಕ್ರಿಯೆಯಾಗಿ ದಾಳಿ ಮಾಡಿದ್ದೇವೆ ಎಂದು ಹೇಳಿದೆ.

ಇಸ್ರೇಲ್ ಮೇಲಿನ ಇರಾನ್‌ ದಾಳಿಯು “ಭಯೋತ್ಪಾದಕ ಕೃತ್ಯಗಳಿಗೆ ಕಾನೂನು, ತರ್ಕಬದ್ಧ ಮತ್ತು ಕಾನೂನುಬದ್ಧ ಪ್ರತಿಕ್ರಿಯೆ ” ಎಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಇರಾನ್‌ನ ನಿಯೋಗವು ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: Jimmy Carter : 100ನೇ ವಸಂತಕ್ಕೆ ಕಾಲಿಟ್ಟ ಜಿಮ್ಮಿ ಕಾರ್ಟರ್, ಈ ಮೈಲಿಗಲ್ಲು ತಲುಪಿದ ಮೊದಲ ಅಮೆರಿಕ ಅಧ್ಯಕ್ಷ

ಮಂಗಳವಾರ ಲೆಬನಾನ್ ನಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆ ಹೆಜ್ಬುಲ್ಲಾ ವಿರುದ್ಧ ಭೂಮಿ ಮೇಳೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದ ನಂತರ ಈ ಕ್ಷಿಪಣಿಗಳ ದಾಳಿ ನಡೆದಿದೆ, ಇದು ನೂರಾರು ಜನರನ್ನು ಬಲಿತೆಗೆದುಕೊಂಡ ಒಂದು ವಾರದ ತೀವ್ರ ವೈಮಾನಿಕ ದಾಳಿಯ ನಂತರ ಸಂಘರ್ಷ ಹೆಚ್ಚಿದೆ.

ಇರಾನ್ ಮೇಲೆ ಭೀಕರ ಪರಿಣಾಮ: ಅಮೆರಿಕ ಎಚ್ಚರಿಕೆ

ಇದಕ್ಕೂ ಮುನ್ನಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಅವರು, ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರೊಂದಿಗೆ ಮಾತನಾಡಿ, ಈ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳನ್ನು ರಕ್ಷಿಸುವ ಯುಎಸ್ ಬದ್ಧತೆ ತೋರಲಿದೆ ಎಂದು ಹೇಳಿದರು. ಇರಾನ್ ಅಥವಾ ಅದರ ಪ್ರತಿನಿಧಿಗಳು ಒಡ್ಡುವ ಯಾವುದೇ ಬೆದರಿಕೆಗಳನ್ನು ಎದುರಿಸಲು ಯುನೈಟೆಡ್ ಸ್ಟೇಟ್ಸ್ ಸಿದ್ಧವಿದೆ ಎಂದು ಹೇಳಿದೆ.

ಇಸ್ರೇಲ್ ವಿರುದ್ಧ ಕ್ಷಿಪಣಿ ದಾಳಿ ನಡೆಸಲು ಇರಾನ್ ಸಿದ್ಧತೆ ನಡೆಸುತ್ತಿರುವ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು.

ಇರಾನ್‌ನಿಂದ ಯಾವುದೇ ಬೆದರಿಕೆಗಳನ್ನು ತಡೆಯಲು ಇಸ್ರೇಲ್‌ಗೆ ಸಹಾಯ ಮಾಡಲು ಯುಎಸ್ ಸಿದ್ಧವಾಗಿದೆ. ಏಪ್ರಿಲ್‌ನಲ್ಲಿ ಇರಾನ್ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ಪ್ರಾರಂಭಿಸಿದಾಗ ನೀಡಿದ ಬೆಂಬಲದಂತೆಯೇ ಈ ಬಾರಿಯೂ ನೆರವು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ, ಇಸ್ರೇಲ್ ಮಿಲಿಟರಿ ಜೆರುಸಲೇಂ ಮತ್ತು ಟೆಲ್ ಅವೀವ್ನಲ್ಲಿ ನಾಗರಿಕರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದು ಹಿಜ್ಬುಲ್ಲಾ ಅಥವಾ ಇರಾನ್‌ನಿಂದ ಸಂಭಾವ್ಯ ಪ್ರತೀಕಾರದ ಸಿದ್ಧತೆಗಳನ್ನು ಸೂಚಿಸುತ್ತದೆ. ಗಡಿ ಪ್ರದೇಶದ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಕಾರ್ಯಾಚರಣೆಯಲ್ಲಿ ತನ್ನ ಪಡೆಗಳು ಲೆಬನಾನ್‌ಗೆ ಪ್ರವೇಶಿಸಿವೆ ಎಂದು ಮಿಲಿಟರಿ ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಇಸ್ರೇಲ್‌ನಲ್ಲಿ ಮಿತಿಗಳನ್ನು ಹೇರಲಾಗಿದೆ.