Thursday, 19th September 2024

2 ಗಂಟೆ ಕಾಲ ಐಆರ್​ಸಿಟಿಸಿ ವೆಬ್​ಸೈಟ್ ಸ್ಥಗಿತ

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ವೆಬ್​ಸೈಟ್​ನಲ್ಲಿ ಗುರುವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಳಕೆದಾರರು ಸುಮಾರು ಎರಡು ಗಂಟೆಗಳ ಕಾಲ ಇ-ಟಿಕೆಟ್ ಕಾಯ್ದಿರಿಸಲು ಸಾಧ್ಯ ವಾಗಲಿಲ್ಲ.

ಮಧ್ಯಾಹ್ನ ಈ ಬಗ್ಗೆ ಐಆರ್​ಸಿಟಿಸಿ ಎಕ್ಸ್​ ನಲ್ಲಿ ಪೋಸ್ಟ್​ ಮಾಡಿ ತಾಂತ್ರಿಕ ಅಡಚಣೆ ಉಂಟಾಗಿರುವುದನ್ನು ಒಪ್ಪಿಕೊಂಡಿದೆ.

ತತ್ಕಾಲ್ ಅಥವಾ ಸಾಮಾನ್ಯ ಕೋಟಾದಡಿ ಟಿಕೆಟ್ ಪಡೆಯಲು ಸಾಧ್ಯವಾಗದೇ ಗ್ರಾಹಕರು ಸಾಮಾಜಿಕ ಮಾಧ್ಯಮದಲ್ಲಿ ಅಸಮಾ ಧಾನ ವ್ಯಕ್ತಪಡಿಸಿದರು. ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಅದರ ಮೊಬೈಲ್ ಅಪ್ಲಿಕೇಶನ್ ಎರಡರಲ್ಲೂ ಲಾಗಿನ್ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ವೆಬ್​ಸೈಟ್ ಸ್ಥಗಿತಗೊಂಡಿದ್ದಕ್ಕೆ ಹಲವಾರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

“ಹೇಗಿದ್ದರೂ ರಾತ್ರಿ 11:30 ರಿಂದ 12:30 ರವರೆಗೆ ಮೆಂಟೆನನ್ಸ್​ಗಾಗಿ ಸೈಟ್ ಸ್ಥಗಿತವಾಗಿರುತ್ತದೆ. ಆದರೆ ದೈನಂದಿನ ಮೆಂಟೆನನ್ಸ್​ ನಂತರವೂ ಹಗಲಿನಲ್ಲಿ ವೆಬ್​ಸೈಟ್​ ಬಂದ್​ ಆಗಿರುವುದು ಕಳವಳಕಾರಿ ವಿಷಯವಾಗಿದೆ.” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಐಆರ್​ಸಿಟಿಸಿ ವೆಬ್​ ಸೈಟ್ ಪ್ರತಿದಿನ ರಾತ್ರಿ 11:45 ರಿಂದ 12:20 ರವರೆಗೆ ನಿರ್ವಹಣೆಗಾಗಿ ಸ್ಥಗಿತಗೊಳ್ಳುತ್ತದೆ. ಈ ಸಮಯದಲ್ಲಿ ಬಳಕೆದಾರರಿಗೆ ಟಿಕೆಟ್ ಕಾಯ್ದಿರಿಸಲು ಅಥವಾ ಪಿಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ.

ತಾಂತ್ರಿಕ ದೋಷದ ಮಧ್ಯೆ ಟಿಕೆಟ್​ ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದ ಅನೇಕ ಪ್ರಯಾಣಿಕರ ಖಾತೆಯಿಂದ ಹಣ ಡೆಬಿಟ್ ಆಗಿದೆ. ಆದರೆ ಅವರ ಖಾತೆಯಲ್ಲಿ ಟಿಕೆಟ್ ಬುಕ್ ಆಗಿರುವುದು ತೋರಿಸುತ್ತಿಲ್ಲ. ನಿರ್ವಹಣೆಯ ಕೆಲಸದಿಂದಾಗಿ ವೆಬ್​ಸೈಟ್ ಮತ್ತು ಆಪ್ ನಲ್ಲಿ ದೋಷ ಕಾಣಿಸಿಕೊಂಡಿದ್ದು ಪ್ರಯಾಣಿಕರು ಕೆಲ ಹೊತ್ತಿನ ನಂತರ ಮತ್ತೆ ಪ್ರಯತ್ನಿಸುವಂತೆ ಕೆಲವರಿಗೆ ಐಆರ್​ಸಿಟಿಸಿ ಯಿಂದ ಫ್ಲ್ಯಾಶ್ ಮೆಸೇಜ್ ಬಂದಿದೆ.

Leave a Reply

Your email address will not be published. Required fields are marked *