ಹೊಸದಿಲ್ಲಿ: ಉತ್ತರ ಪ್ರದೇಶ ಪೊಲೀಸ್ ನ ಉಗ್ರ ನಿಗ್ರಹ ಪಡೆಯು ಐಸಿಸ್ ಉಗ್ರಗಾಮಿ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಡಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಐಸಿಸ್ ನ ಅಲಿಗಢ ಘಟಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ನೋಮನ್, ನಾಜಿಮ್ ಮತ್ತು ನಾವೇದ್ ಎಂಬ ಮೂವರನ್ನು ಬಂಧಿಸಲಾಗಿದೆ. ಈ ಮೂವರಿಂದ ಉಗ್ರ ಪ್ರಚೋದನಕಾರಿ ಬರಹಗಳೂ ಪತ್ತೆಯಾಗಿದೆ ಎಂದು ಮೂಲಗಳು ವರದಿ ಮಾಡಿದೆ.
ಎಎಂಯು ವಿದ್ಯಾರ್ಥಿಗಳಾದ ನೋಮನ್, ನಾಜಿಮ್ ಮತ್ತು ನಾವೇದ್ ಅವರು ಐಸಿಸ್‌ನ ಅಲಿಘರ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಖಚಿತಪಡಿಸಿದ ನಂತರ ಬಂಧಿತ ಯುವಕರನ್ನು ಜೈಲಿಗೆ ಕಳುಹಿಸಲು ಎಟಿಎಸ್ ಕಾನೂನು ಕ್ರಮ ಕೈಗೊಳ್ಳುತ್ತಿದೆ.
ಉತ್ತರ ಪ್ರದೇಶ ಎಟಿಎಸ್ ಈ ಹಿಂದೆ ಅಲಿಘರ್ ನಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿತ್ತು. ಇಬ್ಬರೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲ ಯದ ವಿದ್ಯಾರ್ಥಿಗಳು. ನಂತರ, ಐಸಿಸ್ ನ ಅಲಿಘರ್ ಮಾಡ್ಯೂಲ್ ಗೆ ಸಂಬಂಧಿಸಿದ ಉಳಿದ ಶಂಕಿತ ಭಯೋತ್ಪಾದಕರನ್ನು ಭೇದಿಸಲು ಎಟಿಎಸ್ ಪ್ರಮುಖ ಕ್ರಮ ಕೈಗೊಂಡಿತ್ತು.