Friday, 22nd November 2024

ಭಾರತೀಯ ಬಾಹ್ಯಾಕಾಶ ಅಸೋಸಿಯೇಷನ್’ಗೆ ನಾಳೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಸ್ಥಳೀಯ ಬಾಹ್ಯಾಕಾಶ ಸಂಬಂಧಿತ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತೀಯ ಬಾಹ್ಯಾಕಾಶ ಅಸೋಸಿಯೇಷನ್ (ISPA)ಗೆ ಚಾಲನೆ ನೀಡಲಿದ್ದಾರೆ.

ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿದ ಮತ್ತು ಬಾಹ್ಯಾಕಾಶ ರಂಗದಲ್ಲಿ ಪ್ರಮುಖ ಪ್ಲೇಯರ್‌ ಆಗಿ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ವತಃ ಪ್ರಧಾನಿ ಅವರು, ಐಎಸ್ ಪಿಎ ಉಡಾವಣೆಯಲ್ಲಿ ಭಾಗವಹಿಸುವುದಾಗಿ ಟ್ವಿಟ್‌ ಮೂಲಕ ತಿಳಿಸಿದ್ದು, ಅಕ್ಟೋಬರ್ 11ರಂದು ನಾನು ಭಾರತೀಯ ಬಾಹ್ಯಾಕಾಶ ಆಸೋಸಿಯೇಷನ್ ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಸೇರುತ್ತೇನೆ. ಈ ವಲಯದ ಪ್ರಮುಖ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಬಾಹ್ಯಾಕಾಶ ಮತ್ತು ನಾವೀನ್ಯತೆಯ ಜಗತ್ತಿನಲ್ಲಿ ಆಸಕ್ತಿ ಹೊಂದಿರುವವರು ನಾಳಿನ ಕಾರ್ಯಕ್ರಮ ನೋಡಬೇಕು’ ಎಂದಿದ್ದಾರೆ.