Thursday, 12th December 2024

Israel Strikes Houthi : ಹೆಜ್ಬುಲ್ಲಾ ಆಯಿತು, ಹೌತಿ ಉಗ್ರರ ಮೇಲೆ ದಾಳಿ ನಡೆಸಿದ ಇಸ್ರೇಲ್‌

Israel Strikes Houthi

ಜೆರುಸಲೇಂ: ವಿದ್ಯುತ್ ಕೇಂದ್ರಗಳು ಮತ್ತು ಬಂದರು ಸೇರಿದಂತೆ ಯೆಮೆನ್‌ನ ಹಲವಾರು ಹೌತಿ ಬಂಡುಕೋರರ ನೆಲೆಗಳ ಮೇಲೆ ಹಲವಾರು ವಿಮಾನಗಳನ್ನು ಬಳಸಿ ದಾಳಿ ನಡೆಸುತ್ತಿದ್ದೇವೆ (Israel Strikes Houthi) ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ. ಇರಾನ್ ಬೆಂಬಲಿತ ಬಂಡುಕೋರ ಗುಂಪು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಕ್ಷಿಪಣಿಯಿಂದ ಗುರಿಯಾಗಿಸಿಕೊಂಡಿತ್ತು. ಅದಾಗಿ ಒಂದು ದಿನದ ನಂತರ ಪ್ರತಿ ದಾಳಿಗಳು ನಡೆದಿವೆ.

ಇಂದು ನಡೆದ ದೊಡ್ಡ ಪ್ರಮಾಣದ ಕಾರ್ಯಾಚರಣೆಯಲ್ಲಿ, ಫೈಟರ್ ಜೆಟ್‌ಗಳು , ಇಂಧನ ತುಂಬುವ ವಿಮಾನಗಳು ಮತ್ತು ಬೇಹುಗಾರಿಕೆ ವಿಮಾನಗಳು ಸೇರಿದಂತೆ ಹಲವಾರು ವಾಯುಪಡೆಯ ವಿಮಾನಗಳು ಯೆಮೆ ನ್‌ ರಾಸ್ ಇಸಾ ಮತ್ತು ಹೊಡೆಡಾ ಪ್ರದೇಶಗಳಲ್ಲಿ ಹೌತಿ ಭಯೋತ್ಪಾದಕರ ನೆಲೆಯ ಮೇಲೆ ದಾಳಿ ನಡೆಸಿವೆ” ಎಂದು ಮಿಲಿಟರಿ ವಕ್ತಾರ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಹೇಳಿಕೆ ನೀಡಿದ್ದಾರೆ.

ಐಡಿಎಫ್ (ಮಿಲಿಟರಿ) ವಿದ್ಯುತ್ ಕೇಂದ್ರಗಳು ಮತ್ತು ತೈಲ ಆಮದಿಗೆ ಬಳಸುವ ಬಂದರುಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಮಿಲಿಟರಿ ಹೇಳಿಕೆ ತಿಳಿಸಿದೆ.

2014ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದ ಹೌತಿಗಳು, ಶಸ್ತ್ರಾಸ್ತ್ರಗಳನ್ನು ಈ ಪ್ರದೇಶಕ್ಕೆ ವರ್ಗಾಯಿಸಲು ಮತ್ತು ಮಿಲಿಟರಿ ಅಗತ್ಯಗಳಿಗೆ ಸರಬರಾಜು ಮಾಡಲು ಬಳಸಿದ್ದ ಜಾಗಕ್ಕೆ ಭಾನುವಾದ ದಾಳಿ ನಡೆದಿದೆ.

ಇದನ್ನೂ ಓದಿ: Lebanon-Israel war: ಇಸ್ರೇಲ್‌ನಿಂದ ಮತ್ತೊಂದು ಭರ್ಜರಿ ಬೇಟೆ- 48 ಗಂಟೆಗಳಲ್ಲಿ ಮತ್ತೊಬ್ಬ ಹೆಜ್ಬುಲ್ಲಾ ಕಮಾಂಡರ್‌ ಹತ್ಯೆ

ಇಸ್ರೇಲ್ ರಾಜ್ಯದ ವಿರುದ್ಧ ಹೌಥಿ ಆಡಳಿತವು ಇತ್ತೀಚೆಗೆ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಯನ್ನು ನಡೆಸಲಾಗಿದೆ. ಹೌತಿ ನಿಯಂತ್ರಿತ ಅಲ್-ಮಸಿರಾ ಸ್ಟೇಷನ್ ಭಾನುವಾರ ವರದಿ ಮಾಡಿದಂತೆ, ಇಸ್ರೇಲ್ ದಾಳಿಗಳು “ಹೊಡೆಡಾ ಮತ್ತು ರಾಸ್ ಇಸಾ ಬಂದರುಗಳು” ಮತ್ತು ಎರಡು ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿತ್ತು.